11:29 PM Monday21 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಕದ್ರಿ ಕಂಬಳದ ದಿ ಸ್ಕಿನ್‌ ಕ್ಲಿನಿಕ್‌: ಹೊಸ ತಂತ್ರಜ್ಞಾನದ ಅತ್ಯಾಧುನಿಕ ಉಪಕರಣ ಅನಾವರಣ; ಖ್ಯಾತ ಚರ್ಮರೋಗ ತಜ್ಞೆ ಡಾ.ವಿಂಧ್ಯಾ ಪೈ ಸಾರಥ್ಯ

13/07/2024, 22:06

ಮಂಗಳೂರು(reporterkarnataka.com): ನಗರದಲ್ಲಿ ಅತ್ಯಾಧುನಿಕ ಚರ್ಮ ಚಿಕಿತ್ಸೆಗೆ ಹೆಸರಾದ ದಿ ಸ್ಕಿನ್‌ ಕ್ಲಿನಿಕ್‌ನಲ್ಲಿ ವಯಸ್ಸು ಕಡಿಮೆಗೊಳಿಸುವ, ಸ್ನಾಯು ದೃಢಪಡಿಸುವ ಹಾಗೂ ಕೊಬ್ಬು ಕರಗಿಸುವ ಕ್ರಾಂತಿಕಾರಕ ತಂತ್ರಜ್ಞಾನಗಳನ್ನು ನಗರಕ್ಕೆ ಪರಿಚಯಿಸುತ್ತಿದೆ.
ಈ ಚಿಕಿತ್ಸೆಗೆ ಅಗತ್ಯವಿರುವ ಬಿಟಿಎಲ್‌ ಇಂಡಸ್ಟೃೀಸ್‌ನವರ ಅತ್ಯಾಧುನಿಕ ಉಪಕರಣಗಳನ್ನು ಬುಧವಾರ ಸ್ಕಿನ್‌ ಕ್ಲಿನಿಕ್‌ನಲ್ಲಿ ಅನಾವರಣಗೊಳಿಸಲಾಯಿತು.
ಭಾರತ್‌ ಗ್ರೂಪ್‌ನ ನಿರ್ದೇಶಕ ಆನಂದ್‌ ಜಿ. ಪೈ ಅವರು ನೂತನ ಉಪಕರಣಗಳಿಗೆ ಚಾಲನೆ ನೀಡಿದರು. ಹೊಸ ತಂತ್ರಜ್ಞಾನ ಎಮ್‌ಸ್ಕಲ್ಪ್ಟ್‌ ನಿಯೊ ಎನ್ನುವ ಉಪಕರಣದ ಮೂಲಕ ಸ್ನಾಯುಗಳ ಟೋನಿಂಗ್‌ ಅನ್ನು ಅತಿ ಕಡಿಮೆ ಸಮಯದಲ್ಲಿ ಕೈಗೊಳ್ಳಬಹುದು. ಎಮ್‌ಫೇಸ್‌ ಎನ್ನುವುದು ಮುಖದ ಟೋನಿಂಗ್‌ ಹಾಗೂ ಫೇಸ್‌ಲಿಫ್ಟ್‌ ಮತ್ತು ಕಾಂಟೋರಿಂಗ್‌ ಚಿಕಿತ್ಸೆಯ ಅತ್ಯಾಧುನಿಕ ಉಪಕರಣವಾಗಿದೆ. ಭಾರತದಲ್ಲಿ ಇದರ ಬಿಡುಗಡೆಯಾದ 6 ತಿಂಗಳಿಗೇ ಮಂಗಳೂರಿನ ಸ್ಕಿನ್‌ ಕ್ಲಿನಿಕ್‌ಗೆ ತರಲಾಗಿದೆ. ಮುಖದ ಚರ್ಮ ಸುಕ್ಕುಗಟ್ಟುವಿಕೆ ತಡೆಯುವುದು, ಗದ್ದದ ಚರ್ಮ ಸಡಿಲವಾಗಿ ನೇತಾಡುವುದನ್ನು ಸರಿಪಡಿಸುವುದರಲ್ಲಿ ಇದು ನೆರವಾಗುತ್ತದೆ. ಇದರಲ್ಲಿ ಯಾವುದೇ ಇಂಜಕ್ಷನ್‌ ಇರುವುದಿಲ್ಲ ಹಾಗೂ ಕನಿಷ್ಠ ಸಮಯದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಎಕ್ಸಿಯೋನ್‌ ಎನ್ನುವುದು ವಯಸ್ಸು ನಿರೋಧಕ ಪರಿಹಾರ ವ್ಯವಸ್ಥೆಯಾಗಿದ್ದು ಚರ್ಮವನ್ನು ಪುನಶ್ಚೇತನಗೊಳಿಸಿ ವಯಸ್ಸಾಗುವ ಲಕ್ಷಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ತಂತ್ರಜ್ಞಾನವಾಗಿರುತ್ತದೆ.
ಲಿಂಫಾಸ್ಟಿಮ್‌ ಎನ್ನುವ ಉನ್ನತ ಚಿಕಿತ್ಸೆ ಮೂಲಕ ದೇಹದ ನೋವುಕಾರಕ ಬಾವುಗಳನ್ನು ಗುಣಪಡಿಸಲಾಗುತ್ತದೆ, ಆ ಮೂಲಕ ಒಟ್ಟಾರೆ ಆರೋಗ್ಯದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ.
ಈ ಎಲ್ಲಾ ಮೇಲಿನ ಚಿಕಿತ್ಸಾ ಕ್ರಮಗಳೂ ನಾನ್ ಇನ್ವೇಸಿವ್‌ ಹಾಗೂ ನೋವು ರಹಿತ ಪ್ರಕ್ರಿಯೆಗಳಾಗಿದ್ದು ಕೆಲವೇ ವಾರಗಳಲ್ಲಿ ಗಮನಿಸಬಹುದಾದ ಧನಾತ್ಮಕ ಪರಿಣಾಮಗಳನ್ನು ತರುತ್ತದೆ. ಪ್ರತಿ ಚಿಕಿತ್ಸೆಯೂ ಗರಿಷ್ಠ 30 ನಿಮಿಷಗಳನ್ನಷ್ಟೇ ತೆಗೆದುಕೊಳ್ಳುತ್ತದೆ.
ದಿ ಸ್ಕಿನ್‌ ಕ್ಲಿನಿಕ್‌ನಲ್ಲಿ ಎಲ್ಲಾ ಚಿಕಿತ್ಸೆಗಳೂ ಖ್ಯಾತ ಚರ್ಮರೋಗ ತಜ್ಞೆ ಡಾ.ವಿಂಧ್ಯಾ ಪೈ ಅವರ ನೇತೃತ್ವದ ತಜ್ಞರ ತಂಡದಿಂದ ಮೇಲ್ವಿಚಾರಣೆಗೊಳಪಟ್ಟು ನಡೆಯುತ್ತವೆ. ಗ್ರಾಹಕರ ಸುರಕ್ಷತೆ ಹಾಗೂ ಚಿಕಿತ್ಸೆಯ ಖಚಿತತೆಯನ್ನು ಕಾಯ್ದುಕೊಳ್ಳಲಾಗುತ್ತದೆ.
ಕದ್ರಿ ಕಂಬಳದ ವ್ಯಾಸರಾವ್‌ ಲೇನ್‌ನಲ್ಲಿರುವ ದಿ ಸ್ಕಿನ್‌ ಕ್ಲಿನಿಕ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ವೆಬ್ ಸೈಟ್; w.w.w.theskinclinic.org.in

ಇತ್ತೀಚಿನ ಸುದ್ದಿ

ಜಾಹೀರಾತು