ಇತ್ತೀಚಿನ ಸುದ್ದಿ
ಕಾಸರಗೋಡು ಕನ್ನಡಿಗರಿಗೆ ಸರಕಾರ ಧ್ವನಿಯಾಗಿದೆ: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್
13/07/2024, 20:51
ಕಾಸರಗೋಡು(reporterkarnataka.com): ಕಾಸರಗೋಡು ಕನ್ನಡಿಗರಿಗೆ ಸರ್ಕಾರ ಧ್ವನಿಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು.
ಇಲ್ಲಿ ಪತ್ರಕರ್ತರ ಸಂಘದ ವತಿಯಿಂದ ನಡೆದ ದತ್ತಿನಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊರನಾಡಿನ ಕನ್ನಡಿಗರ ಅಭಿಮಾನ ದೊಡ್ಡದು. ವಿಶೇಷವಾಗಿ ಕಾಸರಗೋಡು ಕನ್ನಡಿಗರ ಭಾವನೆ ಅರ್ಥವಾಗುತ್ತದೆ. ನಿಮ್ಮ ಜೊತೆಯಲ್ಲಿ ಕರ್ನಾಟಕ ಸರ್ಕಾರ ಸದಾ ಇದೆ.
ನಿಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗಡಿ ನಾಡಿನ ಕಾಸರಗೊಡು ಪತ್ರಕರ್ತರ ಬಸ್ ಪಾಸ್ ಕೊಡಿಸುವ ಭರವಸೆ ನೀಡಿದ ಕೆ.ವಿ.ಪ್ರಭಾಕರ್ ಅವರು, ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಸಿಎಂ ಜೊತೆಗೆ ಮಾತನಾಡಿ ಅನುದಾನ ಒದಗಿಸುವುದಾಗಿ ತಿಳಿಸಿದರು.
ಬೆಂಗಳೂರಿನಲ್ಲಿ ನಾವು ರಾಜ್ಯೋತ್ಸವ ಕನ್ನಡಿಗರಾಗಿದ್ದೇವೆ. ಆದರೆ ನೀವು ವರ್ಷದ ಅನುಕಾಲವೂ ಕನ್ನಡ ಭಾಷೆ ಉಳಿಸುವ ಪ್ರಯತ್ನ ಮಾಡುತ್ತಿರುವುದು ಹೆಮ್ಮೆಯ ಮತ್ತು ಅಭಿಮಾನದ ಸಂಗತಿ ಎಂದರು.
ಕಾಸರಗೋಡು ದತ್ತಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಶಾಸಕ ಎ.ಕೆ.ಎಂ.ಅಶ್ರಫ್, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕೆಯುಡಬ್ಲ್ಯೂಜೆ ಕೇರಳ ಘಟಕ ಅಧ್ಯಕ್ಷ ಅಬ್ದುಲ್ ರೆಹಮಾನ್ ಸುಬ್ಬಯ್ಯಕಟ್ಟಿ ಮತ್ತಿತರರು ಹಾಜರಿದ್ದರು.