ಇತ್ತೀಚಿನ ಸುದ್ದಿ
7 ರಾಜ್ಯಗಳ 13 ಕ್ಷೇತ್ರಗಳ ಉಪ ಚುನಾವಣೆ: ಎನ್ ಡಿಎಗೆ ಹೀನಾಯ ಸೋಲು; 10 ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಗೆಲುವು
13/07/2024, 20:39
ಹೊಸದಿಲ್ಲಿ(reporterkarnataka.com): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎಗೆ ಭಾರೀ ಪೈಪೋಟಿ ನೀಡಿದ ಇಂಡಿಯಾ ಮೈತ್ರಿಕೂಟ 7 ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದೆ. 13 ಸ್ಥಾನಗಳ ಪೈಕಿ 10 ಸ್ಥಾನ ಗಳನ್ನು ಇಂಡಿಯಾ ಮೈತ್ರಿಕೂಟ ಗೆದ್ದಿದೆ.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್ ಡಿಎ ಮೈತ್ರಿಕೂಟ ಕೇವಲ 2 ಸ್ಥಾನ ಗಳನ್ನು ಮಾತ್ರ ಪಡೆದುಕೊಂಡಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿದ್ದಾರೆ.
ಬಿಹಾರದಲ್ಲಿ ಸ್ವತಂತ್ರ ಅಭ್ಯರ್ಥಿ ರುಪೌಲಿ ಗೆದ್ದಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಐಎನ್‌ಸಿ ಡೆಹ್ರಾ ಮತ್ತು ನಲಗಢವನ್ನು ಗೆದ್ದರೆ, ಬಿಜೆಪಿ ಹಮೀರ್‌ಪುರದಲ್ಲಿ ಜಯಗಳಿಸಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅಮರವಾರ ಗೆದ್ದಿದೆ. ಪಂಜಾಬ್‌ನಲ್ಲಿ ಎಎಪಿ ಜಲಂಧರ್ ಪಶ್ಚಿಮದಲ್ಲಿ ಗೆದ್ದಿದೆ. ತಮಿಳುನಾಡಿನಲ್ಲಿ ಡಿಎಂಕೆ ವಿಕ್ರವಾಂಡಿಯಲ್ಲಿ ಗೆದ್ದಿದೆ. ಉತ್ತರಾಖಂಡದಲ್ಲಿ ಕಾಂಗ್ರೆಸ್ ಪಕ್ಷವು ಬದರಿನಾಥ್ ಮತ್ತು ಮಂಗಳೌರ್ ಅನ್ನು ಗೆದ್ದುಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ರಾಯಗಂಜ್, ರಣಘಾಟ್ ದಕ್ಷಿಣ್, ಬಾಗ್ದಾ ಮತ್ತು ಮಾಣಿಕ್ತಾಲಾವನ್ನು ಗೆದ್ದಿದೆ.