ಇತ್ತೀಚಿನ ಸುದ್ದಿ
ಜುಲೈ 20 ಮತ್ತು 21: ಬೆಳಗಾವಿಯ ಎಂ ಚಂದರಗಿ ಹಿರೇಮಠದಲ್ಲಿ ಗುರುವಂದನ ಮತ್ತು ಗುರುಭಕ್ತರ ಸಮಾವೇಶ
11/07/2024, 21:33
ವಿರೂಪಾಕ್ಷ ಸ್ವಾಮಿ ಸಾಲಿಮಠ ಬೆಳಗಾವಿ
info.reporterkarnataka@gmail.com
ಗುರುಪೂರ್ಣಿಮೆ ನಿಮಿತ್ಯ ವಾಗಿ ಗುರುಭಕ್ತರ ಸಮಾವೇಶ ಹಿರೇಮಠ ಶ್ರೀ ಗಡದೀಶ್ವರ ಲೋಕ ಕಲ್ಯಾಣ ಫೌಂಡೇಶನ್ ಆಶ್ರಯದಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರು- ಶಿಷ್ಯರ ಬಾಂಧವ್ಯದ ಗುರುವಂದನ ಮತ್ತು ಗುರುಭಕ್ತರ ಸಮಾವೇಶ
ಕಾರ್ಯಕ್ರಮ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ ಚಂದರಗಿ ಶ್ರೀ ಗಡದೀಶ್ವರ ಸಂಸ್ಥಾನ ಹಿರೇಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜುಲೈ 20 ಹಾಗೂ 21ರಂದು ಜರುಗಲಿದೆ.
ತಪೋ ರತ್ನ ಶ್ರೀ ಷ.ಬ್ರ. ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಕಟಕೋಳ ಎಂ. ಚಂದರಗಿ ಅವರ ಸಾನ್ನಿಧ್ಯದಲ್ಲಿ ಶ್ರೀ ಜಗದ್ಗುರು ರೇಣುಕಾ ಶ್ರೀ ಪ್ರಶಸ್ತಿ ಶ್ರೀ ಗುರು ಗಡದೀಶ್ವರ ಸದ್ಭಾವನ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಜರುಗುವುದು.
20ರಂದು ಬೆಳಗ್ಗೆ 7:00ಗೆ ಭಕ್ತರಿಗೆ ಲಿಂಗ ದೀಕ್ಷೆ ಮತ್ತು ಜಂಗಮ ವಟಗಳಿಗೆ ಅಯ್ಯಾಚಾರ ಸಂಜೆ 5:00ಗೆ ಧರ್ಮ ಚಿಂತನಾಗೋಷ್ಠಿ ಕಾರ್ಯಕ್ರಮ ನಡೆಯುವುದು.
ಶಿವಾಚಾರ್ಯ ರತ್ನ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು( ಸಂಸ್ಥಾನ ಹಿರೇಮಠ ಕಟಕೋಳ ಎಂ ಚಂದರಗಿ) ಅವರು ದಿವ್ಯ ಸಾನಿಧ್ಯವನ್ನು ವಹಿಸುವರು. ಶ್ರೀ ಷ.ಬ್ರ. ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು (ಸಂಸ್ಥಾನ ಹಿರೇಮಠ ಹುಕ್ಕೇರಿ ಬೆಳಗಾವಿ) ಇವರಗಳು ಸಾನಿಧ್ಯ ವಹಿಸುವರು.
ಎಂ ಚಂದ್ರಗಿ ಕಟಕೋಳ ಪೂಜ್ಯರ ಸನ್ನಿಧಾನದಲ್ಲಿ 20 ಹಾಗೂ 21ರಂದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಚಂದರಗಿಯ ಚಂದಿರ ಪ್ರಶಸ್ತಿ ಹಾಗೂ ಶ್ರೀ ಗುರು ಗಡದೇಶ್ವರ ಸದ್ಭಾವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಮಸ್ಕಿ ತಾಲೂಕು ಅಧ್ಯಕ್ಷರಾದ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ದಂಪತಿಗೆ ಹಾಗೂ ಮಹಾಂತೇಶ್ ಪಟ್ಟಣಶೆಟ್ಟಿ ದಿದ್ದಿಗಿ ದಂಪತಿಗೆ ಶ್ರೀಗಳಿಂದ ಶ್ರೀರಕ್ಷೆ ಹಾಗೂ ಚಂದರಗಿ ಚೆಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇರುತ್ತದೆ.
ಶ್ರೀ ರೇಣುಕಾ ಗಡದೇಶ್ವರ ದೇವರು ಕಟಕೋಳ ಎಂ .ಚಂದರಗಿ (ಧರ್ಮದರ್ಶಿಗಳು) ಶ್ರೀ ಚಂದ್ರಶೇಖರ ಸ್ವಾಮಿಗಳು (ಹಿರೇಮಠ ಲೋಕಾಪುರ )ಇವರ ಸಮ್ಮುಖದಲ್ಲಿ 21 ರಂದು ಪ್ರಾತಕಾಲ 6:00 ಗಂಟೆಗೆ ಶ್ರೀ ಗಡದೇಶ್ವರ ಕತೃಗದ್ದಿಗೆಗೆ ಹಾಗೂ 108 ಶಿವಲಿಂಗಗಳಿಗೆ ಮಹಾ ರುದ್ರಾಭಿಷೇಕ. ಸಹಾಸ್ರ ಬಿಲ್ವಾರ್ಚನೆ ಪೂಜ್ಯ ಗುರುಗಳ ಹಾಗೂ ಭಕ್ತರ ಸಾಮೂಹಿಕ ಶಿವಪೂಜೆ ಸಹಸ್ರ ಬಿಲ್ವಾರ್ಚನೆ ಹಾಗೂ ಶ್ರೀಗಳ ಸಮ್ಮುಖದಲ್ಲಿ ಜರುಗುವುದು ಹಾಗೂ ಶ್ರೀಗಳ 147ನೇಯ ತುಲಾಭಾರ ಸೇವೆಯನ್ನು ಪುಷ್ಪ ಹನುಮಂತಪ್ಪ ಬಿಜ್ಜರಿಗೆ ಸಾಕಿನ್ ರಾಮದುರ್ಗ ಮತ್ತು ಶ್ರೀಗಳ 148ನೇ ತುಲಾ ಭಾರ ಸೇವೆಯನ್ನು ಗಂಗಯ್ಯ ಚನ್ನವೀರಯ್ಯ ಹಿರೇಮಠ ಯಶೋಧಾ ಗಂಗಯ್ಯ ಹಿರೇಮಠ ಸಾಕಿನ ಹುಬ್ಬಳ್ಳಿ ಇವರು ನೆರವೇರಿಸುವವರು.