ಇತ್ತೀಚಿನ ಸುದ್ದಿ
ಚಾರ್ಮಾಡಿ ಫಾಲ್ಸ್ ನ ನಿಷೇಧಿತ ಪ್ರದೇಶದಲ್ಲಿ ಪ್ರವಾಸಿಗರ ಹುಚ್ಚಾಟ: ಬಟ್ಟೆ ಹೊತ್ತೊಯ್ದ ಪೊಲೀಸರು; ಚಡ್ಡಿಯಲ್ಲಿ ಓಡಿದ ಯುವಕರು
11/07/2024, 11:27
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿಗರಿಗೆ ನಿಷೇಧಿತ ಅಪಾಯಕಾರಿ ಚಾರ್ಮಾಡಿ ಫಾಲ್ಸ್ ನಲ್ಲಿ ಮೋಜಿಗಾಗಿ ಹುಚ್ಚಾಟ ನಡೆಸುತ್ತಿದ್ದ ಯುವಕ ಬಟ್ಟೆಯನ್ನು ಪೊಲೀಸರು ಹೊತ್ತೊಯ್ದ ಘಟನೆ ನಡೆದಿದೆ.
ಚಾರ್ಮಾಡಿ ನಿಷೇಧಿತ ಪ್ರದೇಶದಲ್ಲಿ ಪ್ರವಾಸಿಗ ಯುವಕರು
ಬಂಡೆ ಹತ್ತಿ ಹುಚ್ಚಾಟ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ
ಜಲಪಾತದ ಬಳಿ ಸ್ನಾನ ಮಾಡುತ್ತಿದ್ದರು.ಇದನ್ನು ಕಂಡ ಪೊಲೀಸರು ಪ್ರವಾಸಿಗರ ಜೀವ ರಕ್ಷಣೆಯ ದೃಷ್ಟಿ ಯಿಂದ ಅವರ ಬಟ್ಟೆ ಹೊತ್ತೊಯ್ದು ಬಿಸಿ ಮುಟ್ಟಿಸಿದರು. ಪ್ರವಾಸಿಗರ ಬಟ್ಟೆಯನ್ನು ತಂದು ಪೊಲೀಸರು ತಮ್ಮ ಗಸ್ತು ವಾಹನಕ್ಕೆ ತುಂಬಿಸಿದರು.
ಆರಂಭದಲ್ಲಿ ಸರ್…ಸರ್…ಎನ್ನುತ್ತಾ ಬಟ್ಟೆ ನೀಡುವಂತೆ ಅಂಗಲಾಚುತ್ತಿದ್ದ ಯುವಕರು ಕ್ಲೈಮ್ಯಾಕ್ಸ್ ನಲ್ಲಿ ಪೊಲೀಸರ ಜೊತೆಯೇ ಜಗಳಕ್ಕೆ ಶುರು ಮಾಡಿದರು. ಪೊಲೀಸರಿಗೆ ಆವಾಜ್ ಹಾಕಿ ಮತ್ತೆ ಪೇಚಿಗೆ ಸಿಲುಕಿದರು.
ಸ್ವಲ್ಪ ಹೊತ್ತಿನ ನಂತರ ಎಚ್ಚರಿಕೆ ಜೊತೆಗೆ ಬಟ್ಟೆಯನ್ನು ಕೊಟ್ಟು
ಪೊಲೀಸರು ಕಳುಹಿಸಿದರು.
ಬಣಕಲ್ ಗಸ್ತು ಪೊಲೀಸರಿಂದ ಚಾರ್ಮಾಡಿಯಲ್ಲಿ ಕಾರ್ಯಾಚರಣೆ ನಡೆಸಿದರು.