ಇತ್ತೀಚಿನ ಸುದ್ದಿ
ಮಂಗಳೂರು ಪಾಲ್ದನೆ ಚರ್ಚ್ ಐಸಿವೈಎಂ ಘಟಕದ ನೂತನ ಪದಾಧಿಕಾರಿಗಳ ಪ್ರಮಾಣ ವಚನ
07/07/2024, 15:39

ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಐಸಿವೈಎಂ ಘಟಕದ ನೂತನ ಪದಾಧಿಕಾರಿಗಳ ಪ್ರಮಾಣ ವಚನ ಕಾರ್ಯಕ್ರಮ ಇಂದು ನೆರವೇರಿತು.
ಬೆಳಗ್ಗಿನ ಬಲಿಪೂಜೆಯ ಸಂದರ್ಭದಲ್ಲಿ ಚರ್ಚ್ ಪ್ರಧಾನ ಗುರು ಹಾಗೂ ಸಂಘಟನೆಯ ನಿರ್ದೇಶಕ ಫಾ. ಆಲ್ಬನ್ ಡಿ’ಸೋಜಾ ಅವರು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಐಸಿವೈಎಂ ನೂತನ ಅಧ್ಯಕ್ಷ ವಿಲ್ಸನ್ ಪಿಂಟೊ, ಕಾರ್ಯದರ್ಶಿ ವೆನಿಶಾ ಪಿಂಟೊ, ಉಪಾಧ್ಯಕ್ಷೆ ವಿಯೋಲಾ ಡಿ’ಸೋಜಾ, ಜತೆ ಕಾರ್ಯದರ್ಶಿ ಡಿಯೋನ್ ಫೆರ್ನಾಂಡಿಸ್, ಖಜಾಂಚಿ ಫ್ರೀಡಲ್ ಡಿ’ಸೋಜಾ, “ಆಂಮ್ಚೊ ಯುವಕ್’ ಪ್ರತಿನಿಧಿ ಆ್ಯಶೆಲ್ ಲೋಬೊ, ರೆಡ್ ಡ್ರಾಪ್ ಪ್ರತಿನಿಧಿ ಗ್ಲ್ಯಾವಿನ್ ಡಿ’ಸೋಜಾ, ಕ್ರೀಡಾ ಕಾರ್ಯದರ್ಶಿ ಬ್ರೆಂಡನ್ ಪಿರೇರಾ, ಆಧ್ಯಾತ್ಮಿಕ ಕಾರ್ಯದರ್ಶಿ ವಿನೋಲಾ ಪಿಂಟೊ, ನಿಕಟ ಪೂರ್ವ ಅಧ್ಯಕ್ಷ ರಾಯನ್ ನೊರೊನ್ಹಾ, ವಲಯ ಪ್ರತಿನಿಧಿ ವಿಲೀಶಾ ಬ್ರ್ಯಾಗ್ಸ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಆಧ್ಯಾತ್ಮಿಕ ನಿರ್ದೇಶಕ ಫಾ. ಆಲ್ಬನ್ ಡಿ’ಸೋಜಾ, ಸಂಘಟನೆಯ ಸಚೇತಕ ಹಾಗೂ ಮದರ್ ತೆರೆಸಾ ವಾರ್ಡ್ ಮುಖ್ಯಸ್ಥ ರೋಶನ್ ಮೊಂತೇರೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.