10:17 AM Sunday13 - September 2026
ಬ್ರೇಕಿಂಗ್ ನ್ಯೂಸ್
ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;…

ಇತ್ತೀಚಿನ ಸುದ್ದಿ

ನಾವು ಎಷ್ಟು ಗಿಡಗಳನ್ನು ನೆಟ್ಟು ಬೆಳೆಸುತ್ತೇವೆಯೋ ಅಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ: ಅನಿತಾ ಬಸವರಾಜ್ ಮಂತ್ರಿ

22/08/2021, 15:55

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ರಾಯಚೂರು ಜಿಲ್ಲೆಯ ಸಿರವಾರ ತಾಲೂಕು ಆಸ್ಪತ್ರೆಯ ಬೇಡಿಕೆ ಮೇರೆಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಅಧ್ಯಕ್ಷೆ ಅನಿತಾ ಬಸವರಾಜ್ ಮಂತ್ರಿ ಅವರು ಪರಿಸರ ಕಾರ್ಯದಲ್ಲಿ ತೊಡಗಿದ್ದಾರೆ.

ಪರಿಸರ ಪ್ರೇಮದ ಜತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಅಲ್ಲದೆ ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ದಾರಿದೀಪವಾಗಿದ್ದಾರೆ. ಇಂತಹ ಕೆಲಸ ಮಾಡುವ ಅವರಿಗೆ ಅರಣ್ಯ ಅಧಿಕಾರಿಗಳಾದ ಅಮರೇಶ್ ನಾಯಕ್ ಸ್ಪಂದಿಸಿ ತಕ್ಷಣವೇ ಐವತ್ತಕ್ಕೂ ಹೆಚ್ಚು ಗಿಡಗಳನ್ನು ತಾಲೂಕು ಆಸ್ಪತ್ರೆಗೆ  ಸ್ವತಃ ತಾವೇ ಬಂದು ನೀಡಿದರು. ಪರಿಸರ ಪ್ರೇಮ ಮೆರೆದ ಸಿರವಾರ  ತಾಲೂಕು ಆಸ್ಪತ್ರೆ ಯ ಸಿಬಂದಿಗಳಿಗೆ ಪ್ರಶಂಸಿದರು. 

ವೇದಿಕೆಯನ್ನು ಉದ್ದೇಶ ಮಾತನಾಡಿದ ಅನಿತಾ ಅವರು ಗಿಡಗಳನ್ನು ನಾಟಿಸುವುದು ಅಷ್ಟೇ ಅಲ್ಲ ಅವುಗಳನ್ನು ಸುರಕ್ಷಿತವಾಗಿ ಬೆಳೆಸಬೇಕು .ಅವು ಬೆಳೆದು ದೊಡ್ಡದಾದಾಗ ಆಕ್ಸಿಜನ್ ಹೆಚ್ಚಾಗುತ್ತದೆ. 

ನಾವು ಪರಿಸರದಲ್ಲಿ ಎಷ್ಟು ಗಿಡಗಳನ್ನು ನೆಡುತ್ತೇವೆಯೋ ಅಷ್ಟು ಜನರವನ್ನು ಕಾಪಾಡಿದಷ್ಟೇ ಪುಣ್ಯ ದೊರಕುತ್ತದೆ  ಎಂದು ಹೇಳಿದರು. 

ಈ ಸಂದರ್ಭದಲ್ಲಿ ಕರುನಾಡ ಸೇವಕರು ಜಿಲ್ಲಾಧ್ಯಕ್ಷ ಸಿದ್ದರಾಮೇಶ್ವರ ಎಂ., ಮುಖ್ಯ ಅರಣ್ಯ ಅಧಿಕಾರಿಗಳಾದ ಅಮರೇಶ್ ನಾಯಕ್, ಬಸಲಿಂಗಪ್ಪ ಸಾಹುಕಾರ್,ಕೌಂಸಲರ್ ಕೃಷ್ಣ ನಾಯಕ್, ಮುಖ್ಯ ಆಡಳಿತ ಆರೋಗ್ಯ ಅಧಿಕಾರಿಗಳಾದ ಪರಿಮಳ ಮೇತ್ರಿ, ಡಾ.ಸುನಿಲ್ ಸರೋದೆ, ಹೆಲ್ತ್ ಇನ್ಸ್ ಪೆಕ್ಟರ್ ಯಲ್ಲಲಿಂಗ ಪೂಜಾರಿ, ಪೊಲೀಸ್ ಇಲಾಖೆಯ ಎ ಎಸ್ ಐ ರಾಮಜಿ ಮತ್ತು ಪರಿಸರ ಪ್ರೇಮಿಗಳು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು