ಇತ್ತೀಚಿನ ಸುದ್ದಿ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಉಪ್ಪಿನಂಗಡಿ ಶಾಖೆ: ಜುಲೈ 7ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ
05/07/2024, 18:39

ಮಂಗಳೂರು(reporterkarnataka.com):ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪ್ಪಿನಂಗಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ, ಜೇಸಿಐ ಉಪ್ಪಿನಂಗಡಿ, ಚಾರಿಟೇಬಲ್ ಟ್ರಸ್ಟ್ ಉಪ್ಪಿನಂಗಡಿ, ಜೇಸಿಐ ಉಪ್ಪಿನಂಗಡಿ ಇವರ ಸಹಯೋಗದೊಂದಿಗೆ ಹಲಸು ಹಬ್ಬ –2024 ಕಾರ್ಯಕ್ರಮದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉಪ್ಪಿನಂಗಡಿ ಎಚ್.ಎಂ.ಆಡಿಟೋರಿಯಂ ಜುಲೈ 7ರಂದು ಬೆಳಗ್ಗೆ 9.30ರಿಂದ ಅಪರಾಹ್ನ 2.00ರವರೆಗೆ ಆಯೋಜಿಸಲಾಗಿದೆ.
ಈ ವೈದ್ಯಕೀಯ ಶಿಬಿರದಲ್ಲಿ ದೇರಳಕಟ್ಟೆಯ ಕಣಚೂರು ಆಯುರ್ವೇದ ಆಸ್ಪತ್ರೆಯ ನುರಿತ ವೈದರ ತಂಡದವರಿಂದ ಸಾಮಾನ್ಯ ವೈದ್ಯಕೀಯ ಪರೀಕ್ಷೆ, ಮಧುಮೇಹ ರಕ್ತ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ, ಕೀಲು ಮತ್ತು ಗಂಟು ನೋವು ತಪಾಸಣೆ, ಮೂಲವ್ಯಾದಿ ತಪಾಸಣೆ, ಸ್ತ್ರೀರೋಗ ಮತ್ತು ಪ್ರಸೂತಿ ತಪಾಸಣೆ, ಉಚಿತ ಔಷಧಿ ವಿತರಣೆ, ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆ ನೀಡುವುದು ಹಾಗೂ ಇತರ ವೈದ್ಯಕೀಯ ಸೌಲಭ್ಯವಿರುವುದು.
ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.