ಇತ್ತೀಚಿನ ಸುದ್ದಿ
ಬಂಟ್ವಾಳ ಲಯನ್ಸ್ ಪದಗ್ರಹಣ: ರಾಧಾಕೃಷ್ಣ ಬಂಟ್ವಾಳ್ ಅಧ್ಯಕ್ಷ
04/07/2024, 21:00

ಬಂಟ್ವಾಳ(reporterkarnataka.com): ಬಂಟ್ವಾಳ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಬಂಟ್ವಾಳ ಇದರ 2024-25ನೇ ಸಾಲಿನ ಪದಗ್ರಹಣ ಸಮಾರಂಭ ಬಿ.ಸಿ. ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು.
ಪೂರ್ವ ಜಿಲ್ಲಾ ಗವರ್ನರ್ ಜಿ.ಶ್ರೀನಿವಾಸ್ ಪದಗ್ರಹಣ ನೆರವೇರಿಸಿ ಮಾತನಾಡಿ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಜನರ ಸೇವೆ ಮಾಡಿದಾಗ ಜೀವನ ಸಾರ್ಥಕಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಲಯನ್ಸ್ ಪಾಲನಾ ಕೇಂದ್ರದ ವಿಶೇಷ ಚೇತನ ಮಕ್ಕಳಿಗೆ ಸಮವಸ್ತ್ರ ವಿತರಣೆ, ಅರ್ಹರಿಗೆ ಆರ್ಥಿಕ ಸಹಾಯ, ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ, ಕ್ಲಬ್ ಡೈರೆಕ್ಟರಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಜಿಲ್ಲಾ ಪೂರ್ವ ಗವರ್ನರ್ ಎಸ್. ಸಂಜಿತ್ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ನೂತನ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಮಾತನಾಡಿ ಸಂಘಟನೆ ಶಕ್ತಿಯಾಗಿ ರೂಪುಗೊಳ್ಳಲು ಸದಸ್ಯರ ಸಹಕಾರ ಅಗತ್ಯ.ಮುಂದಿನ ವಾರ್ಷಿಕ ಯೋಜನೆಯಂತೆ ಸಮಾಜಮುಖಿ ಸೇವಾಕಾರ್ಯ ನಡೆಸುವುದಾಗಿ ತಿಳಿಸಿದರು.
ಮಾಜಿ ಚೆಯರ್ ಮೇನ್ ವಸಂತ ಕುಮಾರ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ, ವಿವಿಧ ಪದಾಧಿಕಾರಿಗಳಾದ ಸುಧಾಕರ ಶೆಟ್ಟಿ, ಡೊನಾಲ್ಡ್ ಬಂಟ್ವಾಳ, ದೇವಪ್ಪ ಪೂಜಾರಿ, ಖುಶಿ ಶೆಟ್ಟಿ, ಸ್ಪಟಿಕ ಆಚಾರ್ಯ ಇದ್ದರು.
ಸ್ಥಾಪಕಾಧ್ಯಕ್ಷ ಡಾ.ವಸಂತ ಬಾಳಿಗ, ಶ್ರೀನಿವಾಸ್ ಮೆಲ್ಕಾರ್, ದಾಮೋದರ ಬಿಎಂ, ತಪೋಧನ ಶೆಟ್ಟಿ, ಡಾ.ಧೀರಜ್ ಹೆಬ್ರಿ,ಸುಧಾಕರ ಆಚಾರ್ಯ ಮೊದಲಾದವರಿದ್ದರು.
ನಿರ್ಗಮನ ಅಧ್ಯಕ್ಷ ಪ್ರಶಾಂತ ಕೋಟ್ಯಾನ್ ಸ್ವಾಗತಿಸಿದರು. ಉಮೇಶ ಆಚಾರ್ಯ ಪರಿಚಯಿಸಿದರು. ನೂತನ ಕಾರ್ಯದರ್ಶಿ ದೇವಿಕಾ ದಾಮೋದರ್ ವಂದಿಸಿದರು. ಡಾ.ದಿವ್ಯ ಶೆಟ್ಟಿ ನಿರೂಪಿಸಿದರು.