11:58 AM Saturday12 - September 2026
ಬ್ರೇಕಿಂಗ್ ನ್ಯೂಸ್
ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;…

ಇತ್ತೀಚಿನ ಸುದ್ದಿ

ಬೆಳ್ತಂಗಡಿ: ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಗ್ರಾಮಲೋಕ ಕಾರ್ಯಕ್ರಮ

02/07/2024, 19:32

ಬೆಳ್ತಂಗಡಿ(reporterkarnataka.com): ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ ಮತ್ತು ಮಂಗ್ಳುರ್ಚಿ ಮೊತಿಯಾಂ ಸಾಂಸ್ಕೃತಿಕ ಸಂಘಟನೆಯ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಪ್ರಧಾನ ರಸ್ತೆಯ ಲೋಬೊ ಮೋಟಾರ್ಸ್ ಆವರಣದಲ್ಲಿ ಗ್ರಾಮಲೋಕ ಕಾರ್ಯಕ್ರಮ ಭಾನುವಾರ ನಡೆಯಿತು.
ಬೆಳ್ತಂಗಡಿ ಧರ್ಮ ಕ್ಷೇತ್ರದ ಪ್ರಧಾನ ಧರ್ಮಗುರು ಫಾ| ವಾಲ್ಟರ್ ಡಿಮೆಲ್ಲೊ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಸಂದೇಶದಲ್ಲಿ ಫಾ| ಡಿ’ಮೆಲ್ಲೊ “ಕೊಂಕಣಿ ಭಾಷೆ ವೈವಿಧ್ಯತೆಗಳಿಂದ ಕೂಡಿದ ಎಲ್ಲರನ್ನೂ ಒಳಗೊಳ್ಳುವ ಪ್ರೀತಿಯ ಭಾಷೆ. ವೈಶಿಷ್ಠ್ಯಪೂರ್ಣ ಜಾನಪದ ಮತ್ತು ಗುಣಮಟ್ಟದ ಸಾಹಿತ್ಯ ಪರಂಪರೆ ಕೊಂಕಣಿಗೆ ಭಾಷೆಗೆ ಬಳುವಳಿಯಾಗಿ ಲಭಿಸಿದೆ. ಕೊಂಕಣಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದರ ಜತೆಗೆ, ಕೊಂಕಣಿ ಭಾಷೆಯಲ್ಲಿ ಪರಕೀಯ ಶಬ್ದಗಳ ನುಸುಳುವಿಕೆಯನ್ನು ತಡೆದು ವಿಶಿಷ್ಠತೆಯನ್ನು ಕಾಪಾಡುವ ಜವಾಬ್ದಾರಿಯೂ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಹಿರಿಯ ಕೊಂಕಣಿ ಸಾಹಿತಿಗಳು, ಕಲಾವಿದರಿಂದ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು” ಎಂದು ಕರೆಕೊಟ್ಟರು.


ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ವಿಭಾಗ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು ಮತ್ತು ಅತಿಥಿಗಳನ್ನು ಪರಿಚಯಿಸಿ ಸ್ವಾಗತ ಕೋರಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಲಹಾ ಸಮಿತಿ ಸದಸ್ಯ ಎಚ್. ಎಂ. ಪೆರ್ನಾಲ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಲೋಕ ಕಾರ್ಯಕ್ರಮದಲ್ಲಿ ಸ್ಥಳೀಯ ಕವಿಗಳಾದ ರೋಬರ್ಟ್ ಡಿ ಸೋಜಾ ಮಡಂತ್ಯಾರ್, ಫ್ಲಾವಿಯಾ ಅಲ್ಬುಕೆರ್ಕ್, ಪುತ್ತೂರ್, ತೆಲ್ಮಾ ಮಾಡ್ತಾ, ಮಡಂತ್ಯಾರ್ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಗುರುವಾಯನಕೆರೆಯ ವಿದ್ಯಾ ನಾಯಕ್ ಕೊಂಕಣಿ ಶಿಶುಗೀತೆಗಳನ್ನು ಪ್ರಸ್ತುತಪಡಿಸಿ, ಶಿಶುಗೀತೆಗಳ ಹಿನ್ನೆಲೆ, ಔಚಿತ್ಯ ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿಸ್ತಾರ ಮಾಹಿತಿ ನೀಡಿದರು. ಅಪೊಲಿನ್ ಡಿಸೋಜಾ ಮತ್ತು ತಂಡದವರು ಕೊಂಕಣಿ ಜೋಗುಳ ಹಾಡುಗಳನ್ನು ಸುಶ್ಯಾವ್ಯವಾಗಿ ಹಾಡಿ ಮಾಹಿತಿ ನೀಡಿದರು. ರೊನಾಲ್ಡ್ ಲೋಬೊ, ರೊನಾಲ್ದ್ ಡಿಸೋಜಾ ಮತ್ತು ಆರ್ವಿನ್ ಡಿಸೋಜಾ ಕೊಂಕಣಿ ಹಾಡುಗಳನ್ನು ಹಾಡುವುದರ ಮೂಲಕ ರಂಜಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಸಮಿತಿಯ ಸದಸ್ಯ ಸ್ಟ್ಯಾನಿ ಬೇಳ ಕಾರ್ಯಕ್ರಮ ನಿರೂಪಿಸಿದರು. ಮಂಗ್ಳುರ್ಚಿ ಮೊತಿಯಾಂ ಸಂಘಟನೆಯ ವತಿಯಿಂದ ಅಲ್ಪೋನ್ಸ್ ಮೆಂಡೋನ್ಸಾ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು