7:08 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಹೇಮಾವತಿ ಒಡಲಿಗೆ ವೇಸ್ಟ್ ಮೀನು ಸುರಿಯುವ ಮೀನು ವ್ಯಾಪಾರಿಗಳು: ಬಣಕಲ್ ನಲ್ಲಿ ಕೊಳೆತು ನಾರುತ್ತಿದೆ ನದಿ ತಟ; ಸಾಂಕ್ರಾಮಿಕ ರೋಗದ ಭೀತಿ

02/07/2024, 17:02

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಬಣಕಲ್ ಗ್ರಾಮದಲ್ಲಿ ಹೇಮಾವತಿ ನದಿ ನೀರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಗೂಡ್ಸ್ ವಾಹನಗಳಿಂದ ಹಾಗೂ ಮೀನು ವ್ಯಾಪಾರಸ್ಥರಿಂದ ನದಿ ಮಲೀನಗೊಳ್ಳುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಂಗಳೂರಿನಿಂದ ಮಾರಾಟಕ್ಕೆಂದು ಮೀನು ತಂದು ಉಳಿದ ಮೀನನ್ನು ವ್ಯಾಪಾರಸ್ಥರು ಇಲ್ಲಿ ನದಿಗೆ ಎಸೆಯುತ್ತಿದ್ದಾರೆ.
ಮೀನಿನ ವೇಸ್ಟನ್ನೂ ಕೂಡ ನದಿಗೆ ಹಾಕಲಾಗುತ್ತಿದೆ.
ಬಣಕಲ್ ಪ್ರದೇಶದಲ್ಲಿ ಹೇಮಾವತಿ ನದಿ ತಟದಲ್ಲಿ ರಾಶಿ-ರಾಶಿ ಕೊಳೆತ ಮೀನು ಕಣ್ಣಿಗೆ ರಾಚುತ್ತಿದೆ. ವ್ಯಾಪಾರದ ಬಳಿಕ ಉಳಿದ ಕೊಳೆತ ಮೀನು ಹಾಗೂ ಮೀನಿನ ವೇಸ್ಟನ್ನು ಹೇಮಾವತಿ ನದಿಗೆ ಸುರಿದು ಗಾಡಿ ತೊಳೆದುಕೊಂಡು ಹೋಗುತ್ತಿದ್ದಾರೆ. ನಿತ್ಯ ಹೇಮಾವತಿ ನದಿ ದಡಕ್ಕೆ ಹತ್ತಾರು ಗೂಡ್ಸ್ ವಾಹನಗಳು ಬಂದು ಹೋಗುತ್ತವೆ.
ಹೇಮಾವತಿ ನದಿ ನೀರು ಗೊರೂರು ಡ್ಯಾಂ ಸೇರಿ ಕೆ.ಆರ್.ಎಸ್. ಮೂಲಕ ಬೆಂಗಳೂರು ತಲುಪುತ್ತದೆ.


ಹಾಸನ ಜಿಲ್ಲೆಯ ಜೀವನಾಡಿಯೇ ಹೇಮಾವತಿ ನದಿಯಾಗಿದೆ. ಮೂಡಿಗೆರೆ ತಾಲೂಕಿನ ನೂರಾರು ಹಳ್ಳಿಯ ಸಾವಿರಾರು ಎಕರೆ ಜಮೀನಿಗೆ ಇದೇ ನೀರು ಆಶ್ರಯ ನೀಡುತ್ತಿದೆ. ಈ ನೀರನ್ನು ಬಳಸಿದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಅನ್ನೋದು ಸ್ಥಳಿಯರ ವಾದವಾಗಿದೆ.ಗೂಡ್ಸ್ ವಾಹನಗಳು, ಮೀನು ಮಾರಾಟಗಾರರ ಮೇಲೆ ಮೂಡಿಗೆರೆ ಜನರ ಕಿಡಿ ಕಾರಿದ್ದಾರೆ. ಗೂಡ್ಸ್ ವಾಹನಗಳ ಮಾಲೀಕರು, ಚಾಲಕರು ಹಾಗೂ ಮೀನು ಮಾರಾಟಗಾರರಿಗೆ ಮೂಡಿಗೆರೆ ಜನರ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು