1:56 AM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಕಾಸ್ಕ್ ಶತಮಾನದ ಟ್ರಸ್ಟ್ ಮತ್ತು ದಕ್ಷಿಣ ಕನ್ನಡದ ಕಥೋಲಿಕ್ ಸಂಘಟನೆಯಿಂದ 316 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

01/07/2024, 16:35

ಮಂಗಳೂರು(reporterkarnataka.com):ನಗರದ ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಶತಮಾನದ ಸಭಾಂಗಣದಲ್ಲಿ ಗಮನಾರ್ಹ ಕಾರ್ಯಕ್ರಮ ನಡೆಯಿತು. ಕಾಸ್ಕ್ ಶತಮಾನದ ಟ್ರಸ್ಟ್ ಮತ್ತು ದಕ್ಷಿಣ ಕನ್ನಡದ ಕಥೋಲಿಕ್ ಸಂಘಟನೆಯು ವಿವಿಧ ಧರ್ಮಗಳ 316 ವಿದ್ಯಾರ್ಥಿಗಳಿಗೆ 30 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನಗಳನ್ನು ವಿತರಿಸಿದೆ.
ಈ ವಿಶೇಷ ಸಂದರ್ಭದಲ್ಲಿ ಮಂಗಳೂರು ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪೀಟರ್ ಪೌಲ್ ಸಲ್ಡಾನ ಅವರು ಮತ್ತು ಖ್ಯಾತ ಉದ್ಯಮಿ ಮೈಕಲ್ ಡಿಸೋಜ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.


ಕಾರ್ಯಕ್ರಮವು ಅ| ವಂ| ಡಾ| ಪೀಟರ್ ಪೌಲ್ ಅವರಿಗೆ ಗುಲಾಬಿ ಹೂವುಗಳಿಂದ ಸ್ವಾಗತ ಮತ್ತು ಅವರ ಪೋಷಕ ಸಂತರಾದ ಸೈಂಟ್ ಪೀಟರ್ ಮತ್ತು ಪೌಲ್’ರವರಿಗೆ ಗೌರವ ಸಲ್ಲಿಸಿ ಮಣಿಪುರಿ ವಿದ್ಯಾರ್ಥಿಗಳು ಹಾಡಿದ ಹಾಡಿನೊಂದಿಗೆ, ಕಾರ್ಯಕ್ರಮ ಆರಂಭಗೊಂಡು ಸಂಕೇತದೀಪ ಬೆಳಗಿಸಲಾಯಿತು.
ಕಾಸ್ಕ್ ಶತಮಾನದ ಟ್ರಸ್ಟ್‌ನ ನಿರ್ವಾಹಕ ಟ್ರಸ್ಟಿ ಕ್ಯಾಪ್ಟನ್ ವಿನ್ಸೆಂಟ್ ಪಾಯ್ಸ್ ಅವರು ಸ್ವಾಗತ ಭಾಷಣ ಮಾಡಿದರು. ನಂತರ ಮುಖ್ಯ ಅತಿಥಿ ಮೈಕಲ್ ಡಿಸೋಜಾ ಅವರು ವಿದ್ಯಾರ್ಥಿಗಳಿಗೆ ಪ್ರೇರಪಕ ಭಾಷಣ ಮಾಡಿದರು. ಉಜ್ವಲ ಭವಿಷ್ಯಕ್ಕಾಗಿ ಶ್ರಮ ಹೂಡುವುದರ ಮತ್ತು ನಿರಂತರ ಪ್ರಯತ್ನದ ಮಹತ್ವವನ್ನು ಅವರು ಒತ್ತಿಹೇಳಿದರು. ವೈಫಲ್ಯಗಳಿಂದ ನಿರುತ್ಸಾಹಗೊಳ್ಳದಿರಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದ ಸಂಯೋಜಕ ಉಲ್ಲಾಸ್ ರಾಸ್ಕಿನ್ಹಾ ಅವರು ವಿದ್ಯಾರ್ಥಿವೇತನ ವಿತರಣೆಯ ಮಾನದಂಡಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಆನಂತರ ಅ| ವಂ| ಡಾ| ಪೀಟರ್ ಪೌಲ್ 316 ವಿದ್ಯಾರ್ಥಿವೇತನಗಳನ್ನು ಫಲಾನುಭವಿಗಳಿಗೆ ವಿತರಣ ಮಾಡಿದುದು.
ಅ| ವಂ| ಡಾ| ಪೀಟರ್ ಪೌಲ್ ಅವರು ಸಹ ಸಭೆಯನ್ನುದ್ದೇಶಿಸಿ ಭವಿಷ್ಯದ ಪ್ರಯತ್ನಗಳಲ್ಲಿ ಯಶಸ್ವಿಗಾಗಿ ಶ್ರಮಿಸುವಂತೆ ವಿದ್ಯಾರ್ಥಿಗಳಿಗೆ ಪ್ರೇರಕ ಸಲಹೆಗಳನ್ನು ನೀಡಿದರು. ಕೋವಿಡ್ ಸಂದರ್ಭದಲ್ಲಿ ತನ್ನ ಇಬ್ಬರು ಪೋಷಕರನ್ನು ಕಳೆದುಕೊಂಡ ಇಮ್ಮಾನುಯೇಲ್ ಗೋವಿಸ್ ಸೇರಿದಂತೆ ಇಬ್ಬರು ಮಾಜಿ ವಿದ್ಯಾರ್ಥಿ ವೇತನ ಫಲಾನುಭವಿಗಳು ಸಿಎಸ್‌ಕೆ ಶತಮಾನದ ಟ್ರಸ್ಟ್‌ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಇಮ್ಮಾನುಯೇಲ್‌ನ ತಮ್ಮ ಡೊಮಿನಿಕ್ ಅವರು ಗೌರವ ಸೂಚಕವಾಗಿ ಗಣ್ಯರಿಗೆ ಗುಲಾಬಿ ಹೂವುಗಳನ್ನು ನೀಡಿದರು. ಮಣಿಪುರದಿಂದ ನಿರಾಶ್ರಿತ ವಿದ್ಯಾರ್ಥಿನಿಯೊಬ್ಬರು ತಮ್ಮ ಕಠಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆದ ತಮ್ಮ ಕೃತಜ್ಞತೆಯನ್ನು ಹಂಚಿಕೊಂಡರು.
ಕಾರ್ಯಕ್ರಮವು ಸಿಎಸ್‌ಕೆ ಶತಮಾನದ ಟ್ರಸ್ಟ್ ಮತ್ತು ಸಿಎಸ್‌ಕೆ’ಯ ಕಾರ್ಯದರ್ಶಿ ಆನಂದ ಪಿರೇರಾ ಅವರ ಭಾಷಣದೊಂದಿಗೆ ಸಂಪನ್ನಗೊಂಡಿತು. ಅವರು. ಈ ಕಾರ್ಯಕ್ರಮವನ್ನು ಅರ್ಥಪೂರ್ಣ ಮತ್ತು ಯಶಸ್ವಿಗೊಳಿಸಲು ತಮ್ಮ ಸಮಯ, ಶ್ರಮ ಮತ್ತು ಸಂಪನ್ಮೂಲಗಳನ್ನು ನೀಡಿದ ಎಲ್ಲರಿಗೂ ಅವರು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು