ಇತ್ತೀಚಿನ ಸುದ್ದಿ
ಮಲೆನಾಡ ಪ್ರಕೃತಿ ಮಡಿಲಿನಲ್ಲಿ ಇದೆಂಥಾ ಅನಾಚಾರ?: ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ?
01/07/2024, 14:37
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ
ಕಾಲಭೈರವೇಶ್ವರನ ಸನ್ನಿಧಿ ಪ್ರವಾಸಿಗರ ಹುಚ್ಚು ಕುಣಿತದ ತಾಣವಾಗಿ ಪರಿಣಮಿಸಿದೆ. ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆ ಗುಡ್ಡದಲ್ಲಿ ಘಟನೆ ನಡೆದಿದೆ.
ಹೊಯ್ಸಳರ ಕಾಲದ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರನ ಕ್ಷೇತ್ರದಲ್ಲಿ ಎಣ್ಣೆ ಹಾಕ್ಕೊಂಡ್, ಧಮ್ ಹೊಡ್ಕೊಂಡ್ ರಸ್ತೆ ಮಧ್ಯೆ ಮೋಜು…ಮಸ್ತಿಯಲ್ಲಿ ನಿರತರಾಗಿದ್ದರು. ಇಂತಹ ಪ್ರವಾಸಿಗರಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೂ ಕಷ್ಟವಾಗಿದೆ.
ವಾಹನಗಳು ಓಡಾಡಲು ಜಾಗವಿಲ್ಲದಂತೆ ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡಿದ್ದಾರೆ.
ಪೊಲೀಸರ ಭಯವಿಲ್ಲದೆ ಸ್ಥಳೀಯರ ಮಾತಿಗೆ ಕಿಮ್ಮತ್ತು ನೀಡದೆ ಪ್ರವಾಸಿಗರು ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ಕುಣಿದ ಕುಪ್ಪಳಿಸಿದ್ದಾರೆ.