ಇತ್ತೀಚಿನ ಸುದ್ದಿ
ಸತ್ತವರ ಹೆಸರಿನಲ್ಲಿಯೂ ಬಸವ ವಸತಿ ಯೋಜನೆ ಹಣ ಖಾತೆಗೆ ಜಮೆ: ಹಣ ಲಪಟಾಯಿಸಿದ ಪಿಡಿಒ ವಿರುದ್ದ ದೂರು
29/06/2024, 19:26
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಬಸವ ವಸತಿ ಯೋಜನೆ ಫಲಾನುಭವಿ ಮೃತಪಟ್ಟು ಮೂರು ವರ್ಷಗಳು ಕಳೆದ ನಂತರ ಅವರ ಖಾತೆಗೆ ಬಿಲ್ ಹಣ ಜಮೆ ಮಾಡಿ, ಹಣವನ್ನು ಲಪಟಾಯಿಸಿ ಅಕ್ರಮವೆಸಗಿರುವ ಘಟನೆ ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯ್ತಿ ಯಲ್ಲಿ ಬೆಳಕಿಗೆ ಬಂದಿದೆ.
ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ಪಿಡಿಒ ನಿರ್ಮಲಾ ರವರು ಕಾನೂನಿಗೆ ವಿರುದ್ದವಾಗಿ ಮೃತಪಟ್ಟ ಫಲಾನುಭವಿ ಖಾತೆಗೆ 59,600/- ರೂ. ಜಮಾ ಮಾಡಿದ್ದಾರೆಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಮತ್ತು ಗಟ್ಟವಾಡಿಪುರ ಗ್ರಾಮದ ಮುಖಂಡ ರಾಜೇಶ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಟ್ಟವಾಡಿಪುರ ಗ್ರಾಮದ ಕೆಂಪಮ್ಮ ರವರಿಗೆ ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ 2017-18 ನೇ ಸಾಲಿನಲ್ಲಿ ಮಂಜೂರಾಗಿದೆ. ಜಿಪಿಎಸ್ ನಂತರ 1 ಮತ್ತು 2 ನೇ ಬಿಲ್ ಅವರ ಖಾತೆಗೆ ಪಾವತಿಸಲಾಗಿದೆ. ಅನಾರೋಗ್ಯದ ನಿಮಿತ್ತ ಕೆಂಪಮ್ಮ ರವರು 9-1-2020 ರಂದು ಮೃತಪಟ್ಟಿದ್ದಾರೆ. ಹೀಗಿದ್ದರೂ ಪಿಡಿಒ ನಿರ್ಮಲಾ ರವರು ಸರ್ಟಿಫೈ ಮಾಡಿ 8-9-2023 ರಂದು ಮೃತ ಕೆಂಪಮ್ಮ ರವರ ಖಾತೆಗೆ 59,600/- ರೂಗಳನ್ನು ಕಾನೂನಿಗೆ ವಿರುದ್ದವಾಗಿ ಜಮೆ ಮಾಡಿದ್ದಾರೆ. ಆ ಹಣವನ್ನು ಬೇರೊಬ್ಬ ವ್ಯಕ್ತಿಯಿಂದ ಹಣವನ್ನು ಡ್ರಾ ಮಾಡಿಸಿ ಅಕ್ರಮವೆಸಗಿದ್ದಾರೆ. ಅಲ್ಲದೆ ಪಂಚಾಯ್ತಿ ಕಚೇರಿಯ ಸಮಯ ಹೊರತುಪಡಿಸಿ ನಂಜನಗೂಡಿನ ಆರ್.ಪಿ.ರಸ್ತೆಯಲ್ಲಿರುವ ಕಂಪ್ಯೂಟರ್ ಸೆಂಟರ್ ನಲ್ಲಿ ಯಾವುದೇ ಸಭೆ ನಡಾವಳಿಗಳನ್ನು ಮಾಡದೆ ಪಂಚಾಯ್ತಿ ಲಾಗಿನ್ ಬಳಸಿಕೊಂಡು 57 ಕ್ಕೂ ಹೆಚ್ಚು ಇ- ಸ್ವತ್ತುಗಳನ್ನ ಮಾಡಿದ್ದಾರೆಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ. ಅಕ್ರಮ ಎಸಗಿರುವ ಪಿಡಿಒ ನಿರ್ಮಲಾ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು , ತನಿಖೆ ನಡೆಸಿ ಇಂತಹ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು ಇಲ್ಲವಾದಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಮುಂದೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೈಟ್.
ನಾಗಣ್ಣ, ಮಾಜಿ ಗ್ರಾಪಂ ಸದಸ್ಯರು ದೊಡ್ಡ ಕವಲಂದೆ.