ಇತ್ತೀಚಿನ ಸುದ್ದಿ
ಉಳ್ಳಾಲ: ಮನೆ ಮೇಲೆ ಆವರಣ ಗೋಡೆ ಕುಸಿದು ಒಂದೇ ಕುಟುಂಬದ 4 ಮಂದಿ ದಾರುಣ ಸಾವು; ಸ್ಪೀಕರ್ ಖಾದರ್ ಸ್ಥಳಕ್ಕೆ ದೌಡು
26/06/2024, 11:40
ಮಂಗಳೂರು(reporterkarnataka.com): ಮನೆ ಮೇಲೆ ಕಾಂಪೌಂಡ್ ಕುಸಿದು ಬಿದ್ದು ಮಕ್ಕಳು ಸಹಿತ ನಾಲ್ವರು ಸಾವನ್ನಪ್ಪಿದ ದಾರುಣ ಘಟನೆ
ಕುತ್ತಾರು ಸಮೀಪ ಮದನಿ ನಗರದಲ್ಲಿ ಬುಧವಾರ ನಡೆದಿದೆ.
ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಕುತ್ತಾರು ಸಮೀಪ ಮದನಿ ನಗರ ಎಂಬಲ್ಲಿ ಬುಧವಾರ ಮನೆಯ ಹಿಂಬದಿಯ ಗೋಡೆ ಕುಸಿದು ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ.
ಮನೆಯೊಳಗಿದ್ದ ಯಾಸಿರ್ (45), ಪತ್ನಿ ಮಾರಿಯಮ್ಮ( 40), ಮಕ್ಕಳಾದ ರಿಯನ ಮತ್ತು ರೀಫನಾ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಡೌಡಾಯಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಶವವನ್ನು ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ನಡೆಯಲಿರುವ ಪ್ರಗತಿ ಪರಿಶೀನ ಸಭೆ ಆಗಮಿಸಿದ್ದ ಸ್ಪೀಕರ್ ಯು. ಟಿ. ಖಾದರ್ ನೇರವಾಗಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.