ಇತ್ತೀಚಿನ ಸುದ್ದಿ
ಸೋಮವಾರಪೇಟೆ ಪ್ರವಾಸಕ್ಕೆ ತೆರಳಿದ್ದ ಪುತ್ತೂರಿನ ಕುಟುಂಬದ ಮೇಲೆ ಇಬ್ಬರು ಗೂಂಡಾಗಳಿಂದ ಹಲ್ಲೆ, ದೌರ್ಜನ್ಯ: ಪ್ರಕರಣ ದಾಖಲು
24/06/2024, 17:43
ಕವಿತಾ ಪೊನ್ನಪ್ಪ ತಲಕಾವೇರಿ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ತೆರಳಿದ್ದ ಪುತ್ತೂರಿನ ಕುಟುಂಬದ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ಗೂಂಡಾಗಳು ಯದ್ವಾತದ್ವಾ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಆಘಾತಕ್ಕಾರಿ ಘಟನೆ ಹಾಡಹಗಲೇ ಸೋಮವಾರಪೇಟೆಯಲ್ಲಿ ನಡೆದಿದೆ.
ಪುತ್ತೂರಿನ ಕುಟುಂಬವೊಂದರ ಸದಸ್ಯರು ಕೊಡಗು ಜಿಲ್ಲೆಯ ಸೋಮವಾರಪೇಟೆಯ ಕೋಟಬೆಟ್ಟು ಪ್ರವಾಸಿ ತಾಣಕ್ಕೆ ತೆರಳಿದ್ದರು. ಆ ವೇಳೆ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಯುವ ಗೂಂಡಾಗಳು ಹೆಂಗಸರು, ಮಕ್ಕಳು ಎಂದು ನೋಡದೆ ಹೆಲ್ಮೆಟ್ ನಲ್ಲಿ ಹಲ್ಲೆ ನಡೆಸಿದ್ದಾರೆ. ಮಹಿಳೆಯರ ಮೈಗೆ ಕೈಹಾಕಿ ಎಳೆದಾಡಿ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದಾರೆ. ಕುತ್ತಿಗೆಯಿಂದ ಚೈನ್ ಕೂಡ ಕಸಿದು ಪರಾರಿಯಾಗಿದ್ದಾರೆ.
ಇದರ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರವಾಸಕ್ಕೆ ಆಗಮಿಸಿದವರು ಈ ಕುರಿತು ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.