3:12 AM Sunday10 - November 2024
ಬ್ರೇಕಿಂಗ್ ನ್ಯೂಸ್
ಮರಾಟಿಗರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧ: ಮೂಡುಬಿದಿರೆಯಲ್ಲಿ ಸಮಾವೇಶ ಉದ್ಘಾಟಿಸಿ ಸಚಿವ… ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಪ್ರೋತ್ಸಾಹ ಧನ 1ರಿಂದ 2 ಲಕ್ಷಕ್ಕೆ… ಕೋವಿಡ್‌; ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಕೋವಿಡ್ ಹಗರಣದ ಕುರಿತು ರಾಜಕೀಯ ‌ದ್ವೇಷಕ್ಕೆ ಪ್ರಾಸಿಕ್ಯೂಶನ್ ಅನುಮತಿ: ಯಡಿಯೂರಪ್ಪ ಹಣಗೆರೆಕಟ್ಟೆ ದೇವಸ್ಥಾನದ ಹಣ ಏರುಪೇರು ಆಗಿದ್ದು ಹೇಗೆ!?: ದೇವರ ಹಣದ ಲೆಕ್ಕ ಪಕ್ಕಾ… ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನೂತನ ಶಸ್ತ್ರ ಚಿಕಿತ್ಸ ಕೊಠಡಿ ಕಾರ್ಯಾರಂಭ ವಿಧಾನಸಭೆ ಉಪ ಚುನಾವಣೆ: ಮತದಾನದ 48 ಗಂಟೆ ಮುನ್ನ ಚುನಾವಣಾ ಚರ್ಚೆ, ಸಂವಾದ,… ರೆಡ್ಡಿ ಪಟಾಲಂ ರಾಜಕೀಯವಾಗಿ ಬೆಳೆಯಲು ಅವಕಾಶ ಬೇಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಸೋಲುವ ಭೀತಿ ಎದುರಾಗಿದೆ; 20 ದಿನದೊಳಗೆ ಮುಖ್ಯಮಂತ್ರಿ ರಾಜೀನಾಮೆ: ಸಂಡೂರಿನಲ್ಲಿ… ಲ್ಯಾಂಡ್ ಜಿಹಾದ್: ಕಾಂಗ್ರೆಸ್ ನಿಂದ ಒಂದು ಕೋಮಿನ ತುಷ್ಟಿಕರಣ: ಕೇಂದ್ರ ಸಚಿವ ಪ್ರಹ್ಲಾದ…

ಇತ್ತೀಚಿನ ಸುದ್ದಿ

ಮಂಗಳೂರು: ರಾಜ್ಯಮಟ್ಟದ ಒಂದು ದಿನದ “ದೀಕ್ಷಾ” ಪಿಎಸ್ ಟಿ ತರಬೇತಿ ಕಾರ್ಯಾಗಾರ

23/06/2024, 22:15

ಮಂಗಳೂರು(reporterkarnataka.com):ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಆತಿಥ್ಯದಲ್ಲಿ ಕರ್ನಾಟಕ ರಾಜ್ಯಮಟ್ಟದ ಒಂದು ದಿನದ “ದೀಕ್ಷಾ” ಪಿಎಸ್ ಟಿ ತರಬೇತಿ ಕಾರ್ಯಾಗಾರ ನಗರದ ಮಲ್ಲಿಕಟ್ಟೆ ಲಯನ್ಸ್ ಸೇವಾ ಭವನದಲ್ಲಿ ಭಾನುವಾರ ನಡೆಯಿತು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನ ರಾಷ್ಟೀಯ ಅಧ್ಯಕ್ಷ ಚಿತ್ರ ಕುಮಾರ್ , ಕರ್ನಾಟಕ ರಾಜ್ಯದ ವಿವಿಧ ಪ್ರಾದೇಶಿಕ ಘಟಕಗಳ ಪರಿಚಯ ಮತ್ತು ಸಾಧನೆ ಬಗ್ಗೆ ವಿವರಿಸಿದರು. ತರಬೇತಿಗೆ ಆಗಮಿಸಿದ ಪ್ರಾದೇಶಿಕ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಜಿ, ಘಟಕದ ಪದಾಧಿಕಾರಿಗಳು ಹಾಗೂ ಮಹಿಳಾ ಘಟಕದ ಸದಸ್ಯರುಗಳ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ತಿಳಿ ಹೇಳಿದರು . ಕರ್ನಾಟಕದ ಇನ್ನುಳಿದ ಪ್ರದೇಶಗಳಲ್ಲಿ ಹೊಸ ಘಟಕಗಳ ಆರಂಭ ಮತ್ತು ವಿಸ್ತರಣೆಯ ಕಾರ್ಯಯೋಜನೆ ಬಗ್ಗೆ ಗಮನ ಸೆಳೆದರು. ಮುಂದಿನ ದಿನಗಳಲ್ಲಿ ಆಂಧ್ರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಪ್ರಾದೇಶಿಕ ಘಟಕಗಳ ವಿಸ್ತರಣೆ ಬಗ್ಗೆ ತಿಳಿಸಿದರು.
ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಒಂದಾದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಕ್ಕೆ ಪಿಪಿಎಫ್ ದೇಣಿಗೆ ನೀಡಿದ ಘಟಕದ ಸದಸ್ಯರಿಗೆ ಗೌರವಂದನೆಯನ್ನು ಸಲ್ಲಿಸಿದರು.
ಸಂಸ್ಥೆಯ ಆಡಳಿತ ವಿಭಾಗ ರಾಷ್ಟ್ರೀಯ ನಿರ್ದೇಶಕ ನವೀನ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮುಖ್ಯ ತರಬೇತಿದಾರ ಡಾ. ಕೇದಿಗೆ ಅರವಿಂದ ರಾವ್, ಎಸ್ ಸಿ ಐ ರಾಷ್ಟ್ರೀಯ ಕಾನೂನು ಸಲಹೆಗಾರ ನಾಗೇಶ್, ರಾಷ್ಟ್ರೀಯ ಉಪಾಧ್ಯಕ್ಷರಾದ ಡಿ. ಕಿಶೋರ್ ಫರ್ನಾಂಡಿಸ್, ಬಿ. ಹುಸೇನ್ ಹೈಕಾಡಿ, ಪುಷ್ಪಾ ಶೆಟ್ಟಿ, ಡಾ. ಶಿವಕುಮಾರ್, ರಾಷ್ಟ್ರೀಯ ನಿರ್ದೇಶಕ ಓರಿಯಂಟೇಶನ್ ಕೆಪಿಎ ರೆಹಮಾನ್, ಮಂಗಳೂರು ಘಟಕ ನಿಕಟ ಪೂರ್ವ ಅಧ್ಯಕ್ಷ ಅಶೋಕ್ ಎಂಕೆ, ಮಂಗಳೂರು ಘಟಕ ಕಾರ್ಯದರ್ಶಿ ಸುನಂದ ಶಿವರಾಂ, ಪಿಎಸ್ ಟಿ ತರಬೇತಿ ಕಾರ್ಯಕ್ರಮದ ಕಾರ್ಯಕ್ರಮ ನಿರ್ದೇಶಕ ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು.
ಎಸ್ ಸಿಐ ಮಂಗಳೂರು ಘಟಕದ ಅಧ್ಯಕ್ಷ ದತ್ತಾತ್ರೇಯ ಬಾಳ ಸ್ವಾಗತಿಸಿದರು. ಅನಿಲ್ ಪಿಂಟೊ ಹಾಗೂ ಹರೀಶ್ ಎ. ಅತಿಥಿ ಪರಿಚಯ ಮಾಡಿದರು. ರಾಷ್ಟ್ರೀಯ ಖಜಾಂಜಿ ಜೋಸ್ ಖಂಡೋತ್ ವಂದಿಸಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯದ 70 ಘಟಕಗಳಿಂದ 300 ಘಟಕಧಿಕಾರಿಗಳು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು