12:25 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ರಾಷ್ಟ್ರಹಿತದ ಹಿನ್ನೆಲೆಯಲ್ಲೇ ಬಿಜೆಪಿ ರಾಜಕಾರಣ: ಶ್ಯಾಮಪ್ರಸಾದ ಮುಖರ್ಜಿ ಬಲಿದಾನ ದಿವಸ ಕಾರ್ಯಕ್ರಮದಲ್ಲಿ ಸಿ.ಟಿ.ರವಿ

23/06/2024, 21:47

ಬೆಂಗಳೂರು(reporterkarnataka.com): ಬಿಜೆಪಿ, ರಾಷ್ಟ್ರಹಿತವನ್ನು ಬಿಟ್ಟುಕೊಡದೆ ರಾಷ್ಟ್ರಹಿತದ ಹಿನ್ನೆಲೆಯಲ್ಲೇ ರಾಜಕಾರಣ ಮಾಡುತ್ತ ಬಂದಿದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಏರ್ಪಡಿಸಿದ್ದ ಜಗನ್ನಾಥ ರಾವ್ ಜೋಶಿಯವರ ಜನ್ಮ ದಿನ ಮತ್ತು ಶ್ಯಾಮಪ್ರಸಾದ ಮುಖರ್ಜಿಯವರ ಬಲಿದಾನ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕದಿಂದ ಹೊರಗೆ, ಮಧ್ಯಪ್ರದೇಶದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಜಗನ್ನಾಥ ರಾವ್ ಜೋಶಿ ಅವರು ಕಾರ್ಯಕರ್ತರಿಗೆ ಪ್ರೇರಕರು. ಅವರ ಹೆಸರನ್ನೇ ಈ ಭವನಕ್ಕೂ ಇಟ್ಟಿದ್ದೇವೆ ಎಂದು ವಿವರಿಸಿದರು.
ಸಂಘಟಕ, ಮಾರ್ಗದರ್ಶಕರಾಗಿ ಪಕ್ಷದ ರಾಜ್ಯ ಮತ್ತು ದೇಶದ ಸಂಘಟನೆಯ ನಾಯಕತ್ವ ವಹಿಸಿ ಅವರು ಕರ್ನಾಟಕ ಕೇಸರಿ ಎಂಬ ಹೆಸರಿಗೆ ತಕ್ಕಂತೆ ಬದುಕಿದವರು ಎಂದು ತಿಳಿಸಿದರು.
ನರಗುಂದದಲ್ಲಿ ಅವರು ಹುಟ್ಟಿದ ಮನೆಯನ್ನು ಸ್ಮಾರಕವಾಗಿ ಪರಿವರ್ತನೆ ಮಾಡಲಾಗಿದೆ. ಅಲ್ಲಿ ಅವರ ಬದುಕಿನ ಸಂಗತಿಗಳ ಚಿತ್ರಣ ಲಭಿಸುತ್ತದೆ. ವರ್ತಮಾನ ಮತ್ತು ಭವಿಷ್ಯದ ಪೀಳಿಗೆಗೂ ಅವರ ಜೀವನಾನುಭವ ಸಿಗಲಿ ಎಂದು ಸ್ಮಾರಕ ಮಾಡಲಾಗಿದೆ ಎಂದು ನುಡಿದರು.
ಶ್ಯಾಮಪ್ರಸಾದ ಮುಖರ್ಜಿಯವರು ತಕ್ಕಮಟ್ಟಿನ ಶ್ರೀಮಂತ ಮನೆತನದಲ್ಲಿ ಅವರ ಜನ್ಮ ಆಗಿತ್ತು. ಕಿರಿಯ ವಯಸ್ಸಿಗೇ ಕಲ್ಕತ್ತ ವಿಶ್ವವಿದ್ಯಾಲಯದ ಕುಲಪತಿಯಾಗಿ ಅವರು ಕೆಲಸ ಮಾಡಿದ್ದರು. ಹಿಂದೂ ಮಹಾಸಭೆಯ ಕಾರ್ಯಕಾರಿ ಅಧ್ಯಕ್ಷ, ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸರಕಾರದಲ್ಲಿ ಸಚಿವರಾಗಿದ್ದರು. ಇವರು ಕೇವಲ ಸುಶಿಕ್ಷಿತ, ವಾಗ್ಮಿಯಲ್ಲ; ರಾಜನೀತಿ ಕ್ಷೇತ್ರದ ಕುಶಲ ಸಂಘಟಕನೂ ಆಗಿದ್ದು, ಅಪ್ರತಿಮ ರಾಷ್ಟ್ರವಾದಿಯಾಗಿ ಕಾರ್ಯನಿರ್ವಹಿಸಿದವರು ಎಂದು ವಿಶ್ಲೇಷಿಸಿದರು. ರಾಷ್ಟ್ರಹಿತದ ಜೊತೆ ಯಾವತ್ತೂ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ಅವರದು ಎಂದು ನುಡಿದರು.
370ನೇ ವಿಧಿ ರದ್ದು ಮಾಡುವ ಜನಸಂಘದ ಮೊದಲ ಹೋರಾಟ ನಡೆದು 69 ವರ್ಷಗಳ ಬಳಿಕ, ಅವರ ಬಲಿದಾನವಾಗಿ 69 ವರ್ಷಗಳ ನಂತರ ನಾವು 370ನೇ ವಿಧಿ ರದ್ದುಪಡಿಸಿ, ಕಾಶ್ಮೀರಕ್ಕೂ ಭಾರತದ ಸಂವಿಧಾನ, ಕಾಶ್ಮೀರಕ್ಕೂ ಮೀಸಲಾತಿ ಅನುಕೂಲ, ಕಾಶ್ಮೀರದ ಜನರೂ ಭಾರತೀಯತೆಯ ಒಂದು ಭಾಗ ಎಂಬುದನ್ನು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈಡೇರಿಸಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸುನೀಲ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಶಾಸಕ ಬಸವರಾಜ್ ಮತ್ತಿಮೂಡ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ವಿಭಾಗ ಸಂಘಟನಾ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ, ವಿಭಾಗ ಪ್ರಭಾರಿ ರಾಜೇಶ್ ಕಾವೇರಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪಕ್ಷದ ಪ್ರಮುಖರು ಕಾರ್ಯಕರ್ತರು ಮತ್ತು ಕಾರ್ಯಾಲಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು