6:10 AM Monday6 - July 2026
ಬ್ರೇಕಿಂಗ್ ನ್ಯೂಸ್
ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ…

ಇತ್ತೀಚಿನ ಸುದ್ದಿ

ಕಾಂಕ್ರೀಟೀಕರಣಗೊಂಡ ರಸ್ತೆಯನ್ನು ಮತ್ತೆ ಅಗೆಯುವುದು ಬಿಜೆಪಿ ಭ್ರಷ್ಟಾಚಾರದ ವಿರಾಟ್ ಸ್ವರೂಪ: ಸಿಪಿಎಂ ಗಂಭೀರ ಆರೋಪ

22/06/2024, 22:35

ಮಂಗಳೂರು(reporterkarnataka.com): ಮಂಗಳೂರು ನಗರದಾದ್ಯಂತ ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಒಂದೆರಡು ತಿಂಗಳಲ್ಲಿ ಮತ್ತೆ ಅಗೆಯುವುದು ಬಿಜೆಪಿ ಆಡಳಿತದ ಭ್ರಷ್ಟಾಚಾರದ ವಿರಾಟ್ ಸ್ವರೂಪವಾಗಿದೆ ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿಯು ಗಂಭೀರ ಆರೋಪ ಮಾಡಿದೆ.
ವಿವಿಧ ಯೋಜನೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಯನ್ನು ಅಭಿವೃದ್ದಿಯ ಹೆಸರಿನಲ್ಲಿ ಕೇವಲ ರಸ್ತೆ ಕಾಮಗಾರಿಗಾಗಿಯೇ ವಿನಿಯೋಗಿಸಲಾಗುತ್ತದೆ.40 ಪರ್ಸೆಂಟ್ ಕಮಿಷನ್ ಹೆಸರಿನಲ್ಲಿ ಕೋಟ್ಯಂತರ ಹಣವನ್ನು ನುಂಗಿ ಹಾಕಲು ಏಕೈಕ ಸಾಧನ ರಸ್ತೆ ಅಭಿವೃದ್ಧಿಯಾಗಿದೆ .ರಸ್ತೆಗೆ ಕಾಂಕ್ರೀಟ್ ಮಾಡುವ ಸಂದರ್ಭದಲ್ಲಿ ರಸ್ತೆಯ ಅಡಿ ಭಾಗದಲ್ಲಿರುವ ಕೇಬಲ್, ನೀರಿನ ಪೈಪ್ ಲೈನ್, ಚರಂಡಿ ಸೇರಿದಂತೆ ಎಲ್ಲವುಗಳನ್ನು ರಸ್ತೆಯ ಬದಿಗೆ ಸರಿಸಿದ ಬಳಿಕವೇ ಕಾಂಕ್ರೀಟ್ ಮಾಡಬೇಕೆಂಬ ನಿಯಮವಿದ್ದರೂ, ಅವೆಲ್ಲವುಗಳನ್ನು ಗಾಳಿಗೆ ತೂರಿ, ಕಾಮಗಾರಿಗಾಗಿ ಮೀಸಲಿಟ್ಟ ಕೋಟ್ಯಂತರ ಹಣ ನಿಗದಿತ ಅವಧಿಯಲ್ಲಿ ಕಾಮಗಾರಿ ನಡೆಯದಿದ್ದರೆ ವಾಪಸ್ ಹೋಗುವ ಭೀತಿಯಿಂದ ತರಾತುರಿಯಲ್ಲಿ ಇದ್ದ ರಸ್ತೆಗೆ ಕಾಂಕ್ರೀಟ್ ಮಾಡಲಾಗುತ್ತದೆ. ಬಳಿಕ ನೀರಿನ ಪೈಪ್ ಸೋರಿಕೆ ಕಂಡಾಗ, ಕೇಬಲ್ ಹಾಕುವಾಗ ಹಾಗೂ ಒಳಚರಂಡಿ ದುರಸ್ತಿಯ ಹೆಸರಿನಲ್ಲಿ ಅಗಿಂದ್ದಾಗೆ ಅಗೆಯಲಾಗುತ್ತದೆ. ಒಟ್ಟಿನಲ್ಲಿ ರಸ್ತೆಯ ಕಾಂಕ್ರೀಟೀಕರಣಗಿಂತಲೂ ಅಗೆಯುವ ಹೆಸರಿನಲ್ಲಿ ದುಪ್ಪಟ್ಟು ಹಣವನ್ನು ನುಂಗಿ ಹಾಕಲಾಗುತ್ತದೆ. ಇದರಿಂದ ಬಿಜೆಪಿ ಆಡಳಿತದ ಬ್ರಹ್ಮಾಂಡ ಭ್ರಷ್ಟಾಚಾರದ ವಿರಾಟ್ ಸ್ವರೂಪ ಬಹಿರಂಗಗೊಂಡಿದೆ ಎಂದು ಸಿಪಿಎಂ ಅಕ್ರೋಶ ವ್ಯಕ್ತಪಡಿಸಿದೆ.


ಬೋಳಾರ ಮುಳಿಹಿತ್ಲು ಪ್ರದೇಶದ ಅತ್ಯಂತ ಪ್ರಮುಖ ರಸ್ತೆಯ ಕಾಂಕ್ರೀಟೀಕರಣ ಕಳೆದ ತಿಂಗಳಷ್ಟೇ ಮುಗಿದಿದ್ದು ಈಗ ಮತ್ತೆ ಕ್ಷುಲ್ಲಕ ಕಾರಣಗಳನ್ನೊಡ್ಡಿ ಮತ್ತೆ ಅಗೆಯಲಾಗಿದೆ. ಇಂತಹ ಅವೈಜ್ಞಾನಿಕ ಕ್ರಮಗಳಿಂದ ಜನತೆಯ ತೆರಿಗೆಯ ಹಣ ವಿಪರೀತವಾಗಿ ಪೋಲಾಗುತ್ತಿದ್ದು ಈ ಬಗ್ಗೆ ಮಂಗಳೂರಿನ ಜನತೆ ತೀರಾ ಎಚ್ಚರದಿಂದಿರಬೇಕೆಂದು ಸಿಪಿಎಂ ದ.ಕ‌.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು