ಇತ್ತೀಚಿನ ಸುದ್ದಿ
ಮಂಗಳೂರು ವಿವಿ ಕಾಲೇಜಿನ ಎನ್ ಸಿಸಿ ಆರ್ಮಿ ಮತ್ತು ಎನ್ ಸಿಸಿ ನೇವಿ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
21/06/2024, 21:44
ಮಂಗಳೂರು(reporterkarnataka.com): ವಿಶ್ವವಿದ್ಯಾನಿಲಯ ಕಾಲೇಜಿನ ಎನ್ ಸಿ ಸಿ ಆರ್ಮಿ ಮತ್ತು ಎನ್ ಸಿಸಿ ನೇವಿ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ನಗರದ ವಿವಿ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಜರುಗಿತು.
ವಿವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಉದ್ಘಾಟಿಸಿ ಮಾತನಾಡಿ, ಯೋಗ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯವಶ್ಯಕ, ಆರೋಗ್ಯ ವಂತ ಜೀವನ ನಡೆಸಲು ಯೋಗ ನಮ್ಮ ಜೀವನದಲ್ಲಿ ಪ್ರಮುಖ ಪತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಈಗಿನಿಂದಲೇ ಪ್ರತಿ ನಿತ್ಯ ಮಾಡುವ ಮನಸ್ಥಿತಿ ತಂದುಕೊಳ್ಳಿ, ಅದರ ಪ್ರಯೋಜನ ಭವಿಷ್ಯದಲ್ಲಿ ತಿಳಿಯುತ್ತದೆ ಎಂದು ಅವರ ಹೇಳಿದರು.
ಎನ್ ಸಿಸಿ ಆರ್ಮಿ ಯ ಮೇಜರ್ ಡಾ. ಜಯರಾಜ್, ಎನ್. ಸಿ. ಸಿ ನೇವಿ ಕಮಂಡರ್ ಡಾ.ಯತೀಶ್ ಕುಮಾರ್ ಉಪಸ್ಥಿತರಿದ್ದರು.
ಕ್ಯಾಡೇಟ್ ಗಳು ಯೋಗ ನಡೆಸಿದರು.