ಇತ್ತೀಚಿನ ಸುದ್ದಿ
ತೈಲ ಬೆಲೆ ಇಳಿಸದಿದ್ದರೆ ಜಿಲ್ಲೆ ಬಂದ್ ಮಾಡಲೂ ಸಿದ್ಧ: ಶಾಸಕ ಡಾ.ಭರತ್ ಶೆಟ್ಟಿ ಎಚ್ಚರಿಕೆ
20/06/2024, 20:51
ಸುರತ್ಕಲ್(reporterkarnataka.com): ರಾಜ್ಯದ ಕಾಂಗ್ರೆಸ್ ಸರ್ಕಾರ ತೈಲ ಬೆಲೆ ಇಳಿಸದೆ ಹೋದರೆ ಬಿಜೆಪಿ ಜಿಲ್ಲಾ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಕುಳಾಯಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ನಡೆದ ಹೆದ್ದಾರಿ ತಡೆ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಸರಕಾರವಿದ್ದಾಗ ಒಂದು ರೂ.ಏರಿಕೆ ಮಾಡಿದ ಮಾತ್ರಕ್ಕೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ 10 ರೂ.ಕಡಿಮೆ ಮಾಡುತ್ತೇವೆ ಎಂದಿದ್ದರು. ಈಗ ಹತ್ತು ಬಿಟ್ಟು3 ರೂ.ದರ ಏರಿಕೆ ಮಾಡಿ ಜನರ ಜೀವಕ್ಕೆ ಕೊಳ್ಳಿ. ಎಳ್ಳಿ ಇಟ್ಟಿದ್ದಾರೆ. ತರಕಾರಿ, ದಿನಸಿ ವಸ್ತುಗಳ ಬೆಲೆ ತೆ ಈ ಈ ತೈಲ ದರ ಏರಿಕೆಯಿಂದ ಏರಿದೆ. ಇದೀಗ ಹೆಚ್ಚು ಮಾಡಿ ಸಾವಿರ ಸಾವಿರ ಕೋಟಿ ಹಣದ ಲೆಕ್ಕವೇ ಇಲ್ಲದಂತಾಗಿದೆ. ಅಭಿವೃದ್ಧಿಪಾತಾಳ ಮುಟ್ಟಿದೆ. ಸದನದಲ್ಲಿ ಸುಳ್ಳು ಉತ್ತರ ಕೊಟ್ಟು ಜನರ ಹಾದಿ ತಪ್ಪಿಸುವ ಕೆಲಸವಾಗುತ್ತಿದೆ ಎಂದರು.
ಕಾನೂನು ಸುವ್ಯವಸ್ಥೆ ಹದೆಗೆಟ್ಟು ನಿತ್ಯ ಕೊಲೆ, ಮಾನಭಂಗ ಪ್ರಕರಣ ನಡೆಯುತ್ತಿದ್ದು ಜನ ಆತಂಕ ಪಡುವಂತಾಗಿದೆ. ಇಂತಹ ಜನ ವಿರೋಧಿ ಸರಕಾರದ ವಿರುದ್ಧ ಶಾಪ ಹಾಕುತ್ತಿದ್ದಾರೆ.
ವಿವಿಧ ನಿಗಮ ಮಂಡಳಿಗಳಲ್ಲಿ ನೂರಾರು ಕೋಟಿ ಹಗರಣ ಸರಮಾಲೆಯನ್ನೇ ಮಾಡುತ್ತಿರುವ ಈ ಸರ್ಕಾರದ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ನುಡಿದರು.
ಸರಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ನೌಕರುಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ, ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಜನುಗೆ ಶಾಸಕರುಗಳು ಉತ್ತರ ನೀಡಲಾಗದ ಸ್ಥಿತಿಯಲ್ಲಿದ್ದೇವೆ ಎಂದರು.
ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಲಾಯಿತು. ಶಾಸಕರ ಸಹಿತ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ಬಿಜೆಪಿ ಪ್ರಮುಖರಾದ ಕಿಶೋರ್ ಕುಮಾರ್, ಪೂಜಾ ಪೈ, ರಾಜೇಶ್ ಕೊಟ್ಟಾರಿ ಮಂಡಲ ಅಧ್ಯಕ್ಷರು ,
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಬೊಟ್ಟಾಡಿ,
ಯತೀಶ್ ಅರ್ವರ್, ಜಿಲ್ಲಾ ಉಪಾಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ ಪೂಜಾ ಪೈ, ವಿಕಾಸ್ ಪುತ್ತೂರು,ಜಗದೀಶ್ ಶೇಣವ ಆರ್.ಸಿ. ನಾರಾಯಣ (ಒಬಿಸಿ ರಾಜ್ಯ ಕಾರ್ಯದರ್ಶಿ), ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಕಾಂಚನ್, ಸಂದೀಪ್ ಪಚ್ಚನಾಡಿ, ಯುವಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಪಾಲಿಕೆ ಉಪಮೇಯರ್ ಸುನೀತಾ, ಮಹಾ ಶಕ್ತಿಕೇಂದ್ರ ಸುರತ್ಕಲ್ ನಗರ 2ಮತ್ತು 2ರ ಅಧ್ಯಕ್ಷರಾದ ದಿನಕರ್ ಇಡ್ಯಾ, ಸುನಿಲ್ ಕುಳಾಯಿ ಮತ್ತು ಪಕ್ಷದ ಅನನ್ಯ ಜವಾಬ್ದಾರಿಯುತ ಪದಾಧಿಕಾರಿಗಳು, ಕಾರ್ಪೊರೇಟರ್ಗಳು, ಕಾರ್ಯಕರ್ತರು, ಪಾಲ್ಗೊಂಡಿದ್ದರು.