ಇತ್ತೀಚಿನ ಸುದ್ದಿ
ಎನ್. ಆರ್. ಪುರ: ಭದ್ರಾ ನದಿಯಲ್ಲಿ ತೆಪ್ಪ ಮುಳುಗಿ 3 ಮಂದಿ ಪ್ರವಾಸಿಗರು ನೀರುಪಾಲು
20/06/2024, 14:38
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ತೆಪ್ಪ ಮುಳುಗಿ ಭದ್ರಾ ನದಿಯಲ್ಲಿ ಮೂವರು ಸಾವು ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರ ತಾಲೂಕಿನಲ್ಲಿ ನಡೆದಿದೆ.
ಭದ್ರಾ ಬ್ಯಾಕ್ ವಾಟರ್ ನಲ್ಲಿ ಮೂವರ ಶವ ಪತ್ತೆಯಾಗಿದೆ.
ಮೃತದೇಹ ಹೊರತೆಗೆಯಲು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಸಹಕರಿಸಿದರು.
ಮೃತದೇಹವನ್ನು ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಶವಗಾರಕ್ಕೆ ರವಾನೆ ಮಾಡಲಾಗಿದೆ.
ನಿನ್ನೆಯೂ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಶೋಧ ಕಾರ್ಯ ನಡೆಸಿದ್ದರು…
ಕತ್ತಲಾದ ಬಳಿಕ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು.
ಇಂದು ಮುಂಜಾನೆಯಿಂದ ಮತ್ತೆ ಶೋಧ ಕಾರ್ಯ ಆರಂಭಿಸಲಾಯಿತು.ಭದ್ರಾ ನದಿ ಹಿನ್ನೀರಿಗೆ ನಾಲ್ವರು ಸ್ನೇಹಿತರು ನಿನ್ನೆ ಪ್ರವಾಸಕ್ಕೆ ಆಗಮಿಸಿದ್ದರು.
ಮೂವರು ತೆಪ್ಪದಲ್ಲಿ ಹೋಗಿದ್ದರು, ಓರ್ವ ದಡದಲ್ಲಿ ಇದ್ದ. ತೆಪ್ಪದಲ್ಲಿ ತೆರಳುವಾಗ ತೆಪ್ಪ ಮಗುಚಿ ಮೂವರು ನೀರು ಪಾಲಾಗಿದ್ದರು. ಆದೀಲ್, ಸಾಜೀದ್ ಹಾಗೂ ಅಫ್ಧಾಖಾನ್ ಮೃತ ದುರ್ದೈವಿಗಳು.
ಮೃತರು ಶಿವಮೊಗ್ಗದ ವಿದ್ಯಾನಗರ ಮೂಲದವರು ಎಂದು ತಿಳಿದು ಬಂದಿದೆ.
ಎನ್.ಆರ್.ಪುರ ತಾಲೂಕಿನ ಬೈರಾಪುರದ ಭದ್ರಾ ಹಿನ್ನೀರಿನಲ್ಲಿ ಈ ದುರ್ಘಟನೆ ನಡೆದಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.