ಇತ್ತೀಚಿನ ಸುದ್ದಿ
ಮಸ್ಕಿ: ಮುಸ್ಲಿಂಮರೇ ಇರದ ಊರಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ
20/08/2021, 21:24
ವಿರುಪಾಕ್ಷ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಗ್ರಾಮೀಣ ಭಾಗದ ಮುಸ್ಲಿಂ ಇರದ ಊರಾದ ರಾಯಚೂರಿನ ಮಸ್ಕಿ ಸಮೀಪದ ಅಂತರಗಂಗೆ ಗ್ರಾಮದಲ್ಲಿ ಯಾವುದೇ ತಕರಾರು ಇಲ್ಲದೆ ಸರಳ ರೀತಿಯ ಮೊಹರಂ ಆಚರಣೆ ಮಾಡಲಾಯಿತು.
ಪ್ರತಿ ವರ್ಷದಂತೆ ಈ ವರ್ಷ ಅದ್ದೂರಿಯಾಗಿ ಹಬ್ಬವು ಆಚರಣೆ ನಡೆಯಲಿಲ್ಲ. ಸರಕಾರ ಆದೇಶದಂತೆ ಸಂಜೆ 4 ಗಂಟೆಗೆ ದೇವರು ಕಳಿಸುವ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಭಕ್ತ ತಮ್ಮ ಹರಕೆಗಳ ತೀರಿಸುತ್ತಾ, ಕೋವಿಡ್ ಇರುವುದರಿಂದ ಶಾಂತಿಯುತವಾಗಿ ಕಾರ್ಯಕ್ರಮ ನೆರವೇರಿಸಿದರು.
ದೇವರು ಕಂಬಾರ ಮನೆಗೆ ಹೋಗಿ ದರ್ಶನ ಮಾಡಿ ಬರೋದು ಮತ್ತು ಭಕ್ತರು ತಮ್ಮ ಹರಕೆಗಳನ್ನು ತೀರಿಸುವುದು ಇಲ್ಲಿನ ವಾಡಿಕೆ. ಮತ್ತೆ ದೇವರು ಹೋಳಿಗೆ ಹೋಗುವಾಗ ಬೆಂಕಿಯಲ್ಲಿ ದೇವರು ನಡೆದಾಡುವ ದೃಶ್ಯ ಆಕರ್ಷಣೀಯವಾದದ್ದು.
ಏನೇ ಆದರೂ ಈ ಬಾರಿ ಕೊರೊನಾ ಕರಿನೆರಳು ಹರಿದಂತೆ ಆಯ್ತು. ದೇವರ ಮನದಲ್ಲಿ ನೆನೆದು ತಮ್ಮ ಹರಕೆಗಳನ್ನು ತೀರಿಸುವ ಕಾರ್ಯಕ್ರಮ ನೆರವೇರಿತು. ಮಸ್ಕಿ ಪಟ್ಟಣ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಸರಳಾಗಿ
ಮೋಹರಂ ಹಬ್ಬ ಆಚರಣೆ ಮಾಡಲಾಯಿತು. ಸಂತೆ ಕೆಲ್ಲೂರು ಗ್ರಾಮದಲ್ಲಿ ಬೆಳಗ್ಗೆ 5 ಗಂಟೆಗೆ ದೇವರು ಅಲ್ಲಲ್ಲಿ ಬಿಲಾಲ್ ತೆಗೆದುಕೊಳ್ಳುವಾಗ ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.