5:42 PM Saturday21 - December 2024
ಬ್ರೇಕಿಂಗ್ ನ್ಯೂಸ್
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು… ಅರಣ್ಯ ಹಕ್ಕು ಕಾಯ್ದೆಯಡಿ ಇದುವರೆಗೆ 16,665 ಪ್ರಕರಣಗಳಲ್ಲಿ ಹಕ್ಕುಪತ್ರ ವಿತರಣೆ: ಸದನದಲ್ಲಿ ಸಿಎಂ… ರಾಜ್ಯದಲ್ಲಿ ಅನಧಿಕೃತವಾಗಿ ವಾಸವಿದ್ದ 24 ಪಾಕ್, 159 ಬಾಂಗ್ಲಾದೇಶ ಮೂಲದವರ ಬಂಧನ: ಗೃಹ… ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕ 2024ಕ್ಕೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಗೃಹಲಕ್ಷ್ಮೀಯರ ಜತೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್: ಫಲಾನುಭವಿಗಳು ಫುಲ್…

ಇತ್ತೀಚಿನ ಸುದ್ದಿ

ಪ್ರಾಣಿಪ್ರಿಯ ತೌಸೀಫ್ ಅಹಮದ್‌ ಅವರಿಗೆ 2024ನೇ ಸಾಲಿನ ಇಂಟರ್ ನ್ಯಾಶನಲ್ ಐಕಾನಿಕ್ ಅನಿಮಲ್ ರೆಸ್ಕ್ಯೂ ಹೀರೋ ಪುರಸ್ಕಾರ

05/06/2024, 17:44

ಮಂಗಳೂರು(reporterkarnataka.com): ಕಡಲನಗರಿ ಮಂಗಳೂರು ಮೂಲದ ಎಂಬಿಎ ಪದವೀಧರರು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಿಯಾಗಿರುವ ತೌಸೀಫ್ ಅಹಮದ್ ಅವರು ಅವರು ಪ್ರಾಣಿಪ್ರಿಯರಾಗಿದ್ದು, ಕಳೆದ 14 ವರ್ಷಗಳಿಂದ ಮಂಗಳೂರು ನಗರದಲ್ಲಿ ಬೀದಿಯ ಪ್ರಾಣಿಗಳನ್ನು ರಕ್ಷಿಸುತ್ತಿದ್ದಾರೆ. ಮೇ 28ರಂದು ಮುಂಬೈನಲ್ಲಿ ನಡೆದ ಇಂಟರ್’ನ್ಯಾಶನಲ್ ಐಕಾನಿಕ್ ಅವಾರ್ಡ್ಸ್ ಸೀಸನ್ 10 ನಲ್ಲಿ “2024ನೇ ಸಾಲಿನ ಇಂಟರ್’ನ್ಯಾಶನಲ್ ಐಕಾನಿಕ್ ಅನಿಮಲ್ ರೆಸ್ಕ್ಯೂ ಹೀರೋ” ಎಂಬ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಪ್ಯಾರವೆಟ್ ತರಬೇತಿ ಪಡೆದ ತೌಸೀಫ್, ತಮ್ಮ ಜೀವನದ ಉದ್ದೇಶವೇ ಪ್ರಾಣಿರಕ್ಷಣೆ ಎಂದು ನಂಬಿದ್ದು, ಇದುವರೆಗೆ 18,000ಕ್ಕೂ ಹೆಚ್ಚು ಪ್ರಾಣಿಗಳನ್ನು, 6,000ಕ್ಕೂ ಹೆಚ್ಚು ಹಾವುಗಳು ಮತ್ತು ಇತರ ಕಾಡುಪ್ರಾಣಿಗಳನ್ನು ರಕ್ಷಿಸಿ, ಚಿಕಿತ್ಸೆ ನೀಡಿ ಪುನರ್ವಸತಿಗೊಳಿಸಿದ್ದಾರೆ. ಎನ್‌ಜಿಒ ತಂಡ ಅಥವಾ ಆಂಬುಲೆನ್ಸ್ ಇಲ್ಲದಿದ್ದರೂ, ಒಬ್ಬಂಟಿಯಾಗಿ ಈ ಮೌನ ಪ್ರಾಣಿಗಳ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.


ಪ್ರಸ್ತುತ, ತೌಸೀಫ್ ಬೀದಿಯಲ್ಲಿ ಬದುಕಲು ಅಸಮರ್ಥ ಪ್ರಾಣಿಗಳಿಗೆ ಆಶ್ರಯ ಕಟ್ಟುವ ಉದ್ದೇಶದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಮ್ಮ ಸಮುದಾಯದಲ್ಲಿ ತಮ್ಮ ಜೀವನವನ್ನು ನಿರಂತರವಾಗಿ ಈ ನೈತಿಕ ಕಾರ್ಯಗಳಿಗೆ ಮೀಸಲಿಟ್ಟ ಇಂತಹ ವ್ಯಕ್ತಿಗಳ ಅಗತ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು