ಇತ್ತೀಚಿನ ಸುದ್ದಿ
ಅಥಣಿ: ಶಿವಯೋಗಿ ನಗರದಲ್ಲಿ ಕೇರಿ ಲಕ್ಕವ್ವ ದೇವಿ ಜಾತ್ರೆ ಸಂಭ್ರಮ; ಸುಮಂಗಲೆಯರಿಂದ ಮೆರವಣಿಗೆ
03/06/2024, 09:42
ಸಂತೋಷ್ ಹನಮಂತ ಹೊಸಟ್ಟಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ಶಿವಯೋಗಿ ನಗರದಲ್ಲಿ ಕೇರಿ ಲಕ್ಕವ್ವ ದೇವಿ ಜಾತ್ರೆ ವಿಜ್ರಂಭಣೆಯಿಂದ ಜರುಗಿತು.
ಮಹೋತ್ಸವದ ಅಂಗವಾಗಿ ನೂರಾರು ಸುಮಂಗಲೆಯರು ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮಾಡಿದರು.
ಕಳೆದ ಅನೇಕ ವರ್ಷಗಳಿಂದ ಕರಿ ಲಕ್ಕವ್ವ ದೇವಿಯ ಜಾತ್ರಾ ಮಹೋತ್ಸವ ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಶ್ರಾವಣ ಮಾಸದ ಇಡೀ ತಿಂಗಳು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾರ್ವಜನಿಕ ದಾಸೋಹ, ಸಾಮೂಹಿಕ ಭಜನೆ ಕೂಡ ನಡೆಯುತ್ತದೆ. ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರೀ ಸಿದ್ದೇಶ್ವರ ಭಜನಾ ಸಂಘ, ಶಿವಯೋಗಿ ಯುತ್ ಕ್ಲಬ್, ಕೇರಿ ಲಕ್ಕವ್ವ ದೇವಿ ಸೇವಾ ಸಂಘದ ಪದಾಧಿಕಾರಿಗಳು ಶ್ರಮಿಸಿದರು. ಬಸಪ್ಪ ಬಕಾರಿ, ಬಾಬು ಜೋಗಾಣಿ, ಸುರೇಶ್ ಬಕಾರಿ ರಮೇಶ್ ಬಕಾರಿ, ಶಿವು ಬಳೊಳ್ಳಿ, ಅಪ್ಪ ಸಾಬ್ ಹಳದಮಳ, ಮಹದೇವ್ ಹಳದಮಳ, ಶಿವಪಾದ ರೋಕಡಿ, ಅಪ್ಪು ಕಿವಿಟಿ, ಹಳದಮಳ, ದಾನಪ್ಪ ಬಕಾರಿ, ಪ್ರೇಮಾ ಬುಟಾಳಿ, ಶೈಲಾ ಹಳ್ಳದಮಳ, ಚಿದಾನಂದ ಹಳ್ಳದಮಳ, ಶಿವಯೋಗಿ ನಗರದ ಗ್ರಾಮಸ್ಥರು ಶಿವಯೋಗಿ ನಗರದ ಭಕ್ತರು ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.