ಇತ್ತೀಚಿನ ಸುದ್ದಿ
ಸಂಸದೆ ಸುಮಲತಾ ಸುತ್ತ ಗೂಂಡಾ, ಫ್ರಾಡ್ ಗಳು ತುಂಬಿದ್ದಾರೆ: ದಳ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪ
19/08/2021, 13:12
ಮಂಡ್ಯ(reporterkarnataka.com): ಮಂಡ್ಯ ಸಂಸದೆ ಸುಮಲತಾ ಅವರು ತನ್ನ ಸುತ್ತಮುತ್ತ ಗೂಂಡಾ ಹಾಗೂ ಫ್ರಾಡ್ ಗಳನ್ನು ಇಟ್ಟುಕೊಂಡಿದ್ದಾರೆ ಎಂದು ಮಂಡ್ಯ ಶಾಸಕ, ಜನತಾ ದಳದ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.
ಸುಮಲತಾ ಅವರ ಅಟೆಂಡರ್ ಚೇತನ್ ಓರ್ವ ಫ್ರಾಡ್ ಆಗಿದ್ದಾನೆ ಎಂದು ಮಾಧ್ಯಮ ಜತೆ ಮಾತನಾಡಿದ ಶಾಸಕರು ಆರೋಪಿಸುವ ಮೂಲಕ ಸಮಲತಾ ಹಾಗೂ ದಳಪತಿಗಳ ಜಗಳ ಮತ್ತೆ ಸ್ಫೋಟಗೊಂಡಿದೆ.
ಸಂಸದೆ ಸುಮಲತಾ ಅವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಭಟ್ ಎಂಬವರು ಮೆಡಿಕಲ್ ಸೀಟು ಕೊಡಿಸುವುದಾಗಿ ಹೇಳಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಸಂಸದೆಯ ಇ ಮೇಲ್ ಬಳಸಿ ಕೆಆರ್ ಎಸ್ ಡ್ಯಾಮ್ ಗೆ ಸಂಬಂಧಿಸಿದ ದಾಖಲೆಗಳನ್ನು ತರಿಸಿಕೊಂಡಿದ್ದಾರೆ. ಸಂಸದೆ ಲೆಟರ್ ಹೆಡ್ ಬಳಸಿ ಎಂಜಿನಿಯರ್ ಗಳನ್ನು ಬೆದರಿಸುತ್ತಿದ್ದಾರೆ. ಅವರ ವಿರುದ್ಧ ಈಗಾಗಲೇ ದೂರು ನೀಡಲಾಗಿದೆ. ಶ್ರೀನಿವಾಸ ಭಟ್ ಅವರನ್ನು ತಕ್ಷಣ ಬಂಧಿಸಬೇಕು. ಅವರ ಪ್ರತಿಯೊಂದು ಫೋನ್ ಡಿಟೈಲ್ಸ್ ತೆಗೆದು ತನಿಖೆ ನಡೆಸಬೇಕು.
ಲೆಟರ್ ಹೆಡ್ ದುರುಪಯೋಗ ಕುರಿತು ಕೂಡ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.