3:27 AM Tuesday30 - December 2025
ಬ್ರೇಕಿಂಗ್ ನ್ಯೂಸ್
ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ರಿಲೇಶನ್ಸ್‌ ಕೌನ್ಸಿಲ್‌ ಆಫ್‌ ಇಂಡಿಯಾದ 18ನೇ ಗ್ಲೋಬಲ್‌ ಕಾನ್‌ಕ್ಲೇವ್‌: ಲೋಗೋ ಅನಾವರಣ

31/05/2024, 20:49

ಮಂಗಳೂರು(reporterkarnataka.com): ಪಬ್ಲಿಕ್‌ ರಿಲೇಶನ್ಸ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಪಿಆರ್‌ಸಿಐ)ದ 18ನೇ ಗ್ಲೋಬಲ್‌ ಕಾನ್‌ಕ್ಲೇವ್‌, ಮಂಗಳೂರು ಚಾಪ್ಟರ್‌ ಸಹಯೋಗಲ್ಲಿ ನಗರದ ಹೊಟೇಲ್‌ ಮೋತಿ ಮಹಲ್‌ನಲ್ಲಿ ನ. 8ರಿಂದ 10 ವರೆಗೆ ನಡೆಯಲಿದ್ದು, ಈ ಸಮಾವೇಶದ ಲೋಗೋ ಅನಾವರಣ ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.

ಕಾರ್ಡೋಲೈಟ್‌ ಸಂಸ್ಥೆಯ ಮುಖ್ಯಸ್ಥ, ಮಾಜಿ ಮೇಯರ್‌ ದಿವಾಕರ ಕದ್ರಿ ಅವರು ಲೋಗೋ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾವೇಶಕ್ಕೆ ಶುಭ ಹಾರೈಸಿದರು.
ಪಿಆರ್‌ಸಿಐ ಸ್ಥಾಪಕಾಧ್ಯಕ್ಷ ಎಂ.ಬಿ.ಜಯರಾಮ್‌ ಅವರು ಮಾತನಾಡಿ, ಈ ವರ್ಷದ ಸಮ್ಮೇಳನದ ಧ್ಯೇಯವಾಕ್ಯ ‘ರಿಕನೆಕ್ಟ್’. ಇದು ಉದ್ಯಮದಲ್ಲಿನ ಸಂಪರ್ಕಗಳನ್ನು ಮರು ನಿರ್ಮಾಣ ಮತ್ತು ಬಲಪಡಿಸುವ ಯೋಜನೆಯನ್ನು ಪ್ರತಿಬಿಂಬಿಸುತ್ತದೆ.
ಸಮಾವೇಶದಲ್ಲಿ ‘ಚಾಣಕ್ಯ’ ಮತ್ತು ‘ಕೌಟಿಲ್ಯ’ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಪಿಆರ್‌, ಮಾಧ್ಯಮ ಮತ್ತು ಕಾರ್ಪೊರೇಟ್‌ ಸಂವಹನ ಮೊದಲಾದ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಲಾಗುತ್ತದೆ. ಪಿ.ಆರ್‌. ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಆಗುವ
ಬದಲಾವಣೆಗಳ ಮೇಲೆ ನಿರ್ದಿಷ್ಟ ಒತ್ತು ನೀಡುವ ಮೂಲಕ, ಬದಲಾಗುತ್ತಿರುವ ಉದ್ಯಮದ ಸವಾಲುಗಳ
ಕುರಿತು ಒಳನೋಟವುಳ್ಳ ಚರ್ಚೆಗಳು ಹಾಗೂ ಸಂವಾದಾತ್ಮಕ ವಿಚಾರಗೋಷ್ಠಿಗಳು ಸಮಾವೇಶದಲ್ಲಿರಲಿದೆ ಎಂದರು.
ಪಿಆರ್‌ ವೃತ್ತಿಪರರು,ಸಂವಹನಕಾರರು ಮತ್ತು ಸಂಬಂಧಿತ ಉದ್ಯಮಗಳಿಗೆ ಪ್ರಧಾನ ರಾಷ್ಟ್ರೀಯ ಸಂಸ್ಥೆಯಾಗಿ ಪಿಆರ್‌ಸಿಐ ಕೆಲಸ ಮಾಡುತ್ತಿದೆ. 2004ರಲ್ಲಿ ಇದು ಸ್ಥಾಪನೆಯಾಗಿದೆ. ಬೆಂಗಳೂರಿನಲ್ಲಿ
ಪ್ರಧಾನ ಕಚೇರಿ ಹೊಂದಿದ್ದು, ದೇಶದ 59 ನಗರಗಳಲ್ಲಿ ವ್ಯಾಪಿಸಿದೆ. ಯುಎಇ ಮತ್ತು ಶ್ರೀಲಂಕಾದಲ್ಲಿ ಘಟಕಗಳನ್ನು ಹೊಂದುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಮತ್ತು ಸಮಾವೇಶದ ಚೇರ್ಮನ್‌ ಡಾ. ರಾಘವೇಂದ್ರ ಹೊಳ್ಳ,ರಾಜ್ಯ ಮುಖ್ಯಸ್ಥ ಪಶುಪತಿ ಶರ್ಮ, ಮಂಗಳೂರು ಘಟಕದ ಅಧ್ಯಕ್ಷ ಕೆನ್ಯೂಟ್‌ ಪಿಂಟೋ,ಕಾರ್ಯದರ್ಶಿ ಉದಯ್‌ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು