ಇತ್ತೀಚಿನ ಸುದ್ದಿ
ಕೊಣಾಜೆ ಪದವಿ ಕಾಲೇಜು ಮುಚ್ಚುವ ತೀರ್ಮಾನ ಕೈಬಿಡಲು ಡಿವೈಎಫ್ ಐ ಸ್ಪೀಕರ್ ಖಾದರ್ ಗೆ ಮನವಿ
29/05/2024, 15:54

ಮಂಗಳೂರು(reporterkarnataka.com): ಮಂಗಳೂರು ವಿವಿ ಅಧೀನದ ಕೊಣಾಜೆ ಪದವಿ ಕಾಲೇಜು ಮುಚ್ಚುವ ತೀರ್ಮಾನವನ್ನು ಕೈ ಬಿಡಲು ಕೋರಿ ಡಿವೈಎಫ್ ಐ ಉಳ್ಳಾಲ ತಾಲೂಕು ಸಮಿತಿ ವತಿಯಿಂದ ಸ್ಥಳೀಯ ಶಾಸಕ ಹಾಗೂ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಉಳ್ಳಾಲ ತಾಲೂಕು ಅಧ್ಯಕ್ಷ ನಿತಿನ್ ಕುತ್ತಾರ್, ಕಾರ್ಯದರ್ಶಿ ರಿಝ್ವಾನ್ ಹರೇಕಳ, ಕೋಶಾಧಿಕಾರಿ ಅಶ್ಫಾಕ್ ಅರೇಕಳ, ಮುಖಂಡರಾದ ಸರ್ಫರಾಜ್ ಗಂಡಿ ಉಪಸ್ಥಿತರಿದ್ದರು.