ಇತ್ತೀಚಿನ ಸುದ್ದಿ
ನಂಜನಗೂಡಿನಲ್ಲಿ ಮಳೆ ಆರ್ಭಟ; ತಡರಾತ್ರಿ 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು; ನಿವಾಸಿಗಳ ಪರದಾಟ
25/05/2024, 12:19
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.ಕಂ
ನಂಜನಗೂಡಿನಲ್ಲಿ ತಡರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಅಶೋಕಪುರಂ ಬಡಾವಣೆಯ 20ಕ್ಕೂ ಹೆಚ್ಚು ಮನೆಗಳಿಗೆ ಚರಂಡಿ ನೀರು ಉಕ್ಕಿ ಹರಿದಿದ್ದು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ.
ಮನೆಯಲ್ಲಿದ್ದ ವಸ್ತುಗಳು ಹಾಳಾಗಿ ಪಾತ್ರೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.
ಹತ್ತಕ್ಕೂ ಹೆಚ್ಚು ಕುಟುಂಬಗಳು ಸೂರಿಲ್ಲದೆ ನಿರಾಶ್ರಿತರಾಗಿದ್ದಾರೆ. ಮನೆಗೆ ನುಗ್ಗಿದ ನೀರನ್ನ ಪಾತ್ರೆಗಳಲ್ಲಿ ತುಂಬಿ ಹೊರಹಾಕುತ್ತಿದ್ದಾರೆ.
ಬಡಾವಣೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ನಿರಾಶ್ರಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳು ಅಶೋಕಪುರಂ ಬಡಾವಣೆ ನಿವಾಸಿಗಳ ನೆರವಿಗೆ ಧಾವಿಸಬೇಕಿದೆ.
ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿ ಸಾಕಷ್ಟು ಹಾನಿ ಉಂಟು ಮಾಡಿದೆ ನಗರಸಭಾ ಅಧಿಕಾರಿಗಳು ಪರಿಶೀಲಿಸಿ ಸಂಕಷ್ಟದಲ್ಲಿರುವ ಅಶೋಕ ಪುರಂ ಬಡಾವಣೆಯ ನಿವಾಸಿಗಳಿಗೆ ಶಾಸ್ವತ ಪರಿಹಾರ ಹಾಗು ಸೌಲಭ್ಯದ ನೆರವನ್ನು ಕಲ್ಪಿಸಬೇಕಿದೆ.