ಇತ್ತೀಚಿನ ಸುದ್ದಿ
ಅಜೆಕಾರಿನ ಪೋರಿ ದುಬೈಯ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವೆಲ್ ಬೀಯಿಂಗ್ ಪ್ರೆಸಿಡೆಂಟ್!!
22/05/2024, 20:37

ಕಾರ್ಕಳ(reporterkarnataka.com): ಪ್ರಸ್ತುತ ದುಬೈನಲ್ಲಿ ನೆಲೆಸಿರುವ ಅಜೆಕಾರು ಬೊಂಡುಕುಮೇರಿ ನಿವಾಸಿ ಯಾದ ರಶ್ಮಿ ಗುರುಪ್ರಸಾದ್ ದಂಪತಿಯ ಮಗಳಾದ 7ನೇ ತರಗತಿಯ ಅನಿಕಾ ದುಬೈ ಹೃದಯಭಾಗದಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವೆಲ್ ಬೀಯಿಂಗ್ ಪ್ರೆಸಿಡೆಂಟ್ ಆಗಿ ಆಯ್ಕೆಯಾಗಿದ್ದಾಳೆ.
ಏಳನೆಯ ತರಗತಿಯಲ್ಲಿ ಓದುತ್ತಿರುವ ಅನಿಕಾ , ಕರಾಟೆ ಯಲ್ಲಿ ದುಬೈನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಮೂರು ಬಾರಿ ಬ್ಲಾಕ್ ಬೆಲ್ಟ್ ಪ್ರಶಸ್ತಿಯನ್ನು ಗೆದ್ದಿದ್ದಾಳೆ. ಕೇವಲ ಆಟೋಟ ಸ್ಪರ್ಧೆ ಗಳಲ್ಲಿ ಮಾತ್ರವಲ್ಲದೆ ಕಲಿಕೆಯಲ್ಲಿ ಉತ್ತಮ ಅಂಕಗಳಿಸಿದ್ದು ಪಠ್ಯೆತರ ಚಟುವಟಿಕೆಗಳಲ್ಲಿ ಭರತನಾಟ್ಯ ದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜ್ಯೂನಿಯರ್ ಪ್ರಶಸ್ತಿ ಸೇರಿದಂತೆ ವೆಸ್ಟರ್ನ್ ಸಿಂಗರ್ ಅಗಿದ್ದಾಳೆ. ದುಬೈ ನ ಪ್ರಖ್ಯಾತ ಮಾಲ್ ನಲ್ಲಿ ಶೋ ಗಳನ್ನು ನೀಡುತ್ತಿದ್ದು ಜನಮನ್ನಣೆ ಗಳಿಸಿದ್ದಾಳೆ.
ಅನಿಕಾ ಅಜೆಕಾರು ಬೊಂಡುಕುಮೇರಿಯ ನಿವೃತ್ತ ಉಪತಹಶಿಲ್ದಾರ್ ಆಗಿರುವ ಬಾಲಕೃಷ್ಣ ಮತ್ತು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿರುವ ಜಲಜಾ ಬಾಲಕೃಷ್ಣ ಅವರ ಮೊಮ್ಮಗಳು.