ಇತ್ತೀಚಿನ ಸುದ್ದಿ
ನಂಜನಗೂಡು: ಗಂಧದ ಕಡ್ಡಿ ತಯಾರಿಕಾ ಘಟಕಕ್ಕೆ ಬೆಂಕಿ; ಲಕ್ಷಾಂತರ ಮೌಲ್ಯದ ಸೊತ್ತು ನಾಶ
14/05/2024, 20:29

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಳ್ಳಂ ಬೆಳಗ್ಗೆಯೇ ಗಂಧದ ಕಡ್ಡಿ ತಯಾರಿಕಾ ಘಟಕವೊಂದು ಹೊತ್ತಿ ಉರಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ನಂಜನಗೂಡು ಪಟ್ಟಣದ ಉರ್ದು ಸ್ಕೂಲ್ ಹಿಂಭಾಗದಲ್ಲಿ ಲ್ಲಿರುವ ಮುಸ್ಲಿಂ ಬ್ಲಾಕ್ ನಲ್ಲಿ ಘಟನೆ ನಡೆದಿದೆ. ರಫೀಕ್ ಎಂಬುವರಿಗೆ ಸೇರಿದ ಗಂಧದಕಡ್ಡಿ ಫ್ಯಾಕ್ಟರಿಯಲ್ಲಿ
ಇದ್ದಕ್ಕಿದ್ದಂತೆ ಬೆಳಿಗ್ಗೆ 5 ಗಂಟೆ ಸಮಯಕ್ಕೆ ದಟ್ಟವಾದ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ.
ದಟ್ಟವಾದ ಬೆಂಕಿಯಿಂದಾಗಿ ಫ್ಯಾಕ್ಟರಿಯಲ್ಲಿದ್ದ ಮೂರು ಗಂಧದ ಕಡ್ಡಿ ತಯಾರು ಮಾಡುವ ಮಿಷನ್ ಗಳು ಸೇರಿದಂತೆ ಗಂಧದಕಡ್ಡಿ ತಯಾರು ಮಾಡುವ ಉತ್ಪನ್ನಗಳು ಗಂಧದಕಡ್ಡಿಯೂ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.
ಅಲ್ಲದೆ ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದ ಮನೆಗಳಿಗೂ ತಗುಲಿ ಗೃಹಪಯೋಗಿ ವಸ್ತುಗಳು ಸಹ ಸುಟ್ಟು ಕರಗಕಲಾಗಿ ನಷ್ಟ ಉಂಟಾಗಿದೆ.
ಬೆಂಕಿ ನಂದಿಸಲು ಅಕ್ಕಪಕ್ಕದ ಹಾಗೂ ಮೊಹಲ್ಲಾದ ನಿವಾಸಿಗಳು ಹರಸಾಹಸ ಪಟ್ಟರು ಯಾವುದೇ ಪ್ರಯೋಜನವಾಗಿಲ್ಲ.
ಕೂಡಲೇ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿ ಆಗಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.