8:01 AM Tuesday7 - January 2025
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ ಎಲ್ಲ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಇಂಧನ ಸಚಿವ… ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮೂಡಿಗೆರೆ: ಹುಲಿ ದಾಳಿಗೆ ಬಾಣಂತಿ ಹಸು ಬಲಿ; ಕರುವಿನ ಆಕ್ರಂಧನ ಬೆಂಗಳೂರು: 22ನೇ ಚಿತ್ರಸಂತೆ ಉದ್ಘಾಟನೆ; ಕಲಾಕೃತಿ ಕೊಂಡು ಕಲಾವಿದರ ಬೆಂಬಲಿಸಲು ಮುಖ್ಯಮಂತ್ರಿ ಕರೆ ವಿರೋಧ ಪಕ್ಷ ಆರೋಪ ಮಾಡಿದರೆ ಸಾಬೀತು ಮಾಡಬೇಕು: ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಇಡಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಲೂಟಿ: ಕಠಿಣ… ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನ ವಿನಿಯೋಗ: ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ…

ಇತ್ತೀಚಿನ ಸುದ್ದಿ

ಮಂಗಳೂರು: ನಾಳೆಯಿಂದ 5 ದಿನಗಳ ಕಾಲ ವಿವಿ ಕಾಲೇಜಿನಲ್ಲಿ ಹಿಂದಿ ಯುವ ಬರಹಗಾರರ ಶಿಬಿರ

12/05/2024, 12:02

ಮಂಗಳೂರು(reporterkarnataka.com): ಹಿಂದಿಯೇತರ ಪ್ರಾಂತೀಯ ಹಿಂದಿ ಯುವ ಬರಹಗಾರರಿಗೆ ಭಾರತ ಸರಕಾರ ಶಿಕ್ಷಣ ಮಂತ್ರಾಲಯದ ಕೇಂದ್ರೀಯ ಹಿಂದಿ ನಿರ್ದೇಶನಾಲಯವು 5 ದಿವಸಗಳ ಬರಹಗಾರರ ಶಿಬಿರವನ್ನು ಮೇ 13ರಿಂದ 17 ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಹಿಂದಿ ಸ್ನಾತಕೋತ್ತರ ವಿಭಾಗ ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಿದೆ.

ಈ ಕಾರ್ಯಕ್ರಮದ ಉದ್ಘಾಟನೆಗೆ ವಿಶ್ವವಿದ್ಯಾನಿಲಯದ ವಿ.ವಿ.ಕುಲಪತಿ ಪ್ರೊ. ಪಿ.ಎಲ್.ಧರ್ಮ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ವಿಶೇಷ ಅತಿಥಿಗಳಾಗಿ ಪ್ರೊ. ಸುನಿಲ್. ಬಿ. ಕುಲಕರ್ಣಿ (ನಿರ್ದೇಶಕರು, ಕೇಂದ್ರೀಯ ಹಿಂದಿ ನಿರ್ದೇಶನಾಲಯ, ನವದೆಹಲಿ) ಉಪಸ್ಥಿತರಿರುವರು. ಶಿಬಿರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ 10 ಕಾಲೇಜಿನ 23 ವಿದ್ಯಾರ್ಥಿಗಳು ಮತ್ತು ಒಟ್ಟು 50 ವಿದ್ಯಾರ್ಥಿಗಳು ಭಾಗವಹಿಸಲಿರುವರು. ಆಯೋಜಕರಾಗಿ ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವ ರಾಜು ಮೊಗವೀರ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ.
ಹಿಂದಿ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ನಾಗರತ್ನ ಎನ್.ರಾವ್, ಪ್ರದೀಪಕುಮಾರ, ನವದೆಹಲಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಈಶ್ವರ ಪವಾರ. ಪುಣೆ. ಡಾ. ಪ್ರತಿಭಾ ಮೊದಲಿಯಾರ್, ಮೈಸೂರು. ಪ್ರೊ. ಪ್ರಭಾ. ವಿ.ಭಟ್. ಧಾರವಾಡ. ಡಾ. ಸುಮಂಗಲಾ ಮಮ್ಮಿಗಟ್ಟಿ, ಧಾರವಾಡ, ಡಾ. ಮಂಜುನಾಥ, ಐಕಳ, ಮಂಗಳೂರು ಡಾ. ಮುಕುಂದ ಪ್ರಭು, ಮಂಗಳೂರು, ಡಾ. ಸುಮಾ. ಟಿ. ರೊಡನ್ನವರ್. ಮಂಗಳೂರು ಅವರು ಭಾಗವಹಿಸುವರು.
ಈ ಶಿಬಿರವು ಪೂರ್ವಾಹ್ನ 10 ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ನಡೆಯುವುದು. ಶಿಬಿರಾರ್ಥಿಗಳಿಗೆ ನೊಂದಣಿ ಮತ್ತು ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಚಹಾ, ಕೇಂದ್ರ ಸರ್ಕಾರದ ಅನುದಾನದಲ್ಲಿ ಉಚಿತವಾಗಿ ಇರುವುದು. ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಪ್ರಥಮವಾಗಿ ಆಯೋಜಿಸಲಾಗಿದ್ದು, ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು