ಇತ್ತೀಚಿನ ಸುದ್ದಿ
ರಂಗ ಸ್ವರೂಪದ ರಂಗೋತ್ಸವ ಬೇಸಿಗೆ ಶಿಬಿರಕ್ಕೆ ಚಾಲನೆ
03/05/2024, 06:46
ಮಂಗಳೂರು (Reporterkarnataka.com)
ರಂಗ ಸ್ವರೂಪ(ರಿ) ಮಂಗಳೂರು ಇದರ ವತಿಯಿಂದ ರಂಗೋತ್ಸವ 2024 ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನೆ ಸಮಾರಂಭವು ದ.ಕ ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮರಕಡ ದಲ್ಲಿ ಜರಗಿತು. ಕಾರ್ಯಕ್ರಮವನ್ನು ಖ್ಯಾತ ಕಲಾವಿದ ಮೂಡಂಬೈಲು ಶಾಲೆಯ ಮುಖ್ಯ ಶಿಕ್ಷಕ ಅರವಿಂದ ಕುಡ್ಲ ಜಾನಪದ ಹಾಡು ಹಾಡುವುದರೊಂದಿಗೆ ಶುಭಾರಂಭಗೊಳಿಸಿದರು.
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮ.ನ.ಪಾ ಸದಸ್ಯರು ಮತ್ತು ಮರಕಡ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶರತ್ ಕುಮಾರ್ ರವರು ರಂಗಸ್ವರೂಪದ ಚಟುವಟಿಕೆಗಳಿಗೆ ಶುಭ ಹಾರೈಸಿದರು, ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ನೇತ್ರಾವತಿ, ರಂಗ ಸ್ವರೂಪದ ಪ್ರಮುಖ ರಾದ ಸುಬ್ರಹ್ಮಣ್ಯ ಕಾಸರಗೋಡು, ನವೀನ್ ಸ್ವರೂಪ, ಹುಸೈನ್ ರಿಯಾಝ್, ಮುಂತಾದವರು ಉಪಸ್ಥಿತರಿದ್ದರು, ಜ್ಯೋತಿ ಸುಬ್ರಹ್ಮಣ್ಯ ಸ್ವಾಗತಿಸಿದರು, ಕಲಾವಿದ ಝಬೇರ್ ಕುಡ್ಲ ವಂದಿಸಿದರು. ರೆಹಮಾನ್ ಖಾನ್ ಕುಂಜತ್ತಬೈಲ್ ನಿರೂಪಿಸಿದರು.