ಇತ್ತೀಚಿನ ಸುದ್ದಿ
ಓಂ ಶಕ್ತಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ: ಆಶಾ ಕಾರ್ಯಕರ್ತೆಯರಿಗೆ ಸನ್ಮಾನ, ಮಕ್ಕಳಿಗೆ ಆಹಾರ ಕಿಟ್ ವಿತರಣೆ
15/08/2021, 22:11
ಮಂಗಳೂರು(reporterkarnataka.com): ನೀರುಮಾರ್ಗ ನಾಲ್ಕುಬೆಟ್ಟು ಓಂ ಶಕ್ತಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಭಾನುವಾರ ೭೫ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಹಾಗೂ ಮಕ್ಕಳಿಗೆ ಆಹಾರ ಕಿಟ್ ವಿತರಿಸುವ ಮೂಲಕ ಸರಳವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನೀರುಮಾರ್ಗ ಗ್ರಾಮಕ್ಕೆ ಸಂಬಂಧಪಟ್ಟ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಹಾಗೂ ಸುಮಾರು ೮೫ ಮಕ್ಕಳಿಗೆ ಆಹಾರ ಕಿಟ್ ವಿತರಿಸಲಾಯಿತು ಹಾಗೂ ಸೈಂಟ್ ಜೋಸೆಫ್ ಇಂಗ್ಲೀಷ್ ಮಿಡಿಯಂ ಅಡ್ಯಾರ್ ಪದವು ಶಾಲೆಯಲ್ಲಿ 2020-2021ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.96.39 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದ ಕಾವ್ಯಶ್ರೀ ಕುಂಡೇವು ಇವರಿಗೆ ಸನ್ಮಾನಿಸಲಾಯಿತು.
ಫಲಾನುಭವಿಗಳ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಗೋಕುಲ್ ದಾಸ್ ಶೆಟ್ಟಿ, ಮಂಗಳೂರಿನ ನ್ಯಾಯವಾದಿ ಸತೀಶ್ ಕಂಪ, ಬೆತೆಲ್ ಎರೆಂಜರ್ಸ್ ವಾಮಂಜೂರು ಇದರ ಮಾಲಕ ಸ್ಟ್ಯಾನ್ಲೀ ಪ್ರೇಮ್, ನೀರುಮಾರ್ಗ ಗ್ರಾಮ ಪಂಚಾಯತ್ ಸದಸ್ಯೆ ಸತ್ಯಾಕ್ಷಿ, ಶ್ರೀ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯೆ ವೀಣಾ ಭಾಸ್ಕರ್, ಸಂಘದ ಉಪಾಧ್ಯಕ್ಷ ಯಶೋಧರ್ ಟೈಲರ್ ಕುಂಡೇವು ಉಪಸ್ಥಿತರಿದ್ದರು.