ಇತ್ತೀಚಿನ ಸುದ್ದಿ
ಹಸೆಮಣೆ ಏರುವ ಮುನ್ನ ಮತ ಚಲಾಯಿಸಿದ ಮದುಮಗಳು!: ಶ್ಲಾಘನೆಗೆ ಪಾತ್ರರಾದ ಸ್ಪಂದನಾ
26/04/2024, 14:46
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹಸೆಮಣೆ ಏರುವ ಮುನ್ನ ಮದುಮಗಳು ಮತ ಚಲಾಯಿಸಿದ ಘಟನೆ ಶೃಂಗೇರಿ ತಾಲೂಕಿನ ಕೂತಗೋಡು ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ.


ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕೂತಗೋಡು ಗ್ರಾಮದ ಸ್ಪಂದನಾ ಎಂಬ ಯುವತಿ ಕಲ್ಯಾಣ ಮಂಟಪಕ್ಕೆ ತೆರಳುವ ವೇಳೆ ಮತದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೂತಗೋಡು ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮದುಮಗಳಾದ ಸ್ಪಂದನಾ ತನ್ನ ಹಕ್ಕು ಚಲಾಯಿಸಿದ್ದಾರೆ.














