2:17 AM Sunday18 - October 2026
ಬ್ರೇಕಿಂಗ್ ನ್ಯೂಸ್
ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20…

ಇತ್ತೀಚಿನ ಸುದ್ದಿ

ಜೆಪ್ಪು ಮಾರ್ಕೆಟ್ -ಬೋಳಾರ ಮಾರಿಗುಡಿ ರಸ್ತೆಯಲ್ಲೇ ವಾಹನಗಳ ಪಾರ್ಕಿಂಗ್: ಪಾದಚಾರಿಗಳ ಗೋಳು ಕೇಳುವವರಿಲ್ಲ: ಸ್ಥಳೀಯ ಕಾರ್ಪೋರೇಟರ್ ಏನು ಮಾಡುತ್ತಿದ್ದಾರೆ?

20/04/2024, 15:58

ಮಂಗಳೂರು(reporterkarnataka.com): ನಗರದ ಯಾವುದೇ ಮೂಲೆಗೆ ಹೋಗಿ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದು ಸಾಮಾನ್ಯವಾಗಿ ಹೋಗಿದೆ. ಯಾರಿಗೆ ಏನೇ ತೊಂದರೆಯಾಗಲಿ, ತನ್ನ ವಾಹನ ಪಾರ್ಕಿಂಗ್ ಆದ್ರೆ ಸಾಕು ಎನ್ನುವ ಮನಸ್ಥಿತಿಯೇ ಇದಕ್ಕೆ ಕಾರಣ. ಇಂತಹ ಸಮಸ್ಯೆ ಜೆಪ್ಪು ಮಾರ್ಕೆಟ್- ಬೋಳಾರ ಮಾರಿಗುಡಿ ರಸ್ತೆಯಲ್ಲೂ ಜೀವಂತವಾಗಿದೆ.
ಜೆಪ್ಪು ಮಾರ್ಕೆಟ್ ನಿಂದ ಇತಿಹಾಸ ಪ್ರಸಿದ್ಧ ಬೋಳಾರ ಮಾರಿಗುಡಿ ದೇವಸ್ಥಾನದ ರಥ ಬೀದಿ ರಸ್ತೆ ವರೆಗೆ ವಾಹನಗಳನ್ನು ರಸ್ತೆಯಲ್ಲಿ ಮತ್ತು ಪಾದಚಾರಿಗಳು ನಡೆದಾಡುವ ಜಾಗದಲ್ಲಿ ಪಾರ್ಕಿಂಗ್ ಮಾಡುವುದು ಮಾಮೂಲಿಯಾಗಿದೆ. ಇದರಿಂದ ಪಾದಚಾರಿಗಳು
ಸಂಕಷ್ಟ ಎದುರಿಸುವಂತಾಗಿದೆ.
ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಮಂಗಳಾದೇವಿ ಮತ್ತು ಶ್ರೀ ಕ್ಷೇತ್ರ ಬೋಳಾರ ಮಾರಿಗುಡಿ ತೆರಳುವ ಬಸ್ಸುಗಳು ಸಂಚರಿಸುವ ಈ ರಸ್ತೆಯು ಜನನಿಬಿಡ ಪ್ರದೇಶವಾಗಿದೆ. ಎಳೆಯ ಮಕ್ಕಳು, ವಯೋ ವೃದ್ಧರು ಈ ಭಾಗದಲ್ಲಿ ತೆರಳುವುದು ಕಷ್ಟಕರವಾಗಿದೆ. ಘನ ವಾಹನಗಳು ಸಂಚರಿಸುವಾಗ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಗಳಿಂದ ಪಾದಚಾರಿಗಳಿಗೆ ನಡೆದಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜೆಪ್ಪು ಮಾರ್ಕೆಟ್,ಮಹಾಲಸಾ ಕಂಪ್ಯೂಟರ್ ಕೇಂದ್ರ, ಪ್ರಧಾನ ಮಂತ್ರಿ ಜನೌಷಧಿ,ಬ್ಯಾಂಕುಗಳಿಗೆ ನಿತ್ಯ ದೈನಂದಿನ ತಮ್ಮ ವ್ಯವಹಾರಗಳಿಗೆ ತೆರಳುವವರಿಗೆ ಈ ಭಾಗದಲ್ಲಿ ನಡೆದಾಡುವುದು ದುಸ್ತರ ಎನಿಸಿದೆ.
ಆಯಾಯ ಕಟ್ಟಡಗಳಲ್ಲಿ ಪಾರ್ಕಿಂಗ್ ಮಾಡದೇ ಜನರು ನಡೆದಾಡುವ ಜಾಗದಲ್ಲಿ ಮತ್ತು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವವರಿಗೆ ಸಂಬಂಧ ಪಟ್ಟವರು ದಂಡ ವಿಧಿಸುವ ಅಗತ್ಯತೆ ಇದೆ. ಪ್ರಮುಖವಾಗಿ ಈ ಪ್ರದೇಶದ ಸ್ಥಳೀಯ ಜನಪ್ರತಿನಿಧಿಗಳು ಪಾದಚಾರಿಗಳಿಗೆ ನಡೆದಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿ ಪಾದಚಾರಿಗಳಿಗೆ ಪ್ರಾಣಕ್ಕೆ ಸಂಕಷ್ಟ ಎದುರಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು