ಇತ್ತೀಚಿನ ಸುದ್ದಿ
ಯುಗಾದಿ: ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪ್ರಾರ್ಥನೆ: ಪಡುಕುತ್ಯಾರಿನಲ್ಲಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಭೇಟಿ
09/04/2024, 21:07
ಮಂಗಳೂರು(reporterkarnataka.com): ಯುಗಾದಿ ಹಬ್ಬದ ಅಂಗವಾಗಿ ನಗರದ ರಥಬೀದಿಯಲ್ಲಿರುವ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸರ್ವರ ಒಳಿತಿಗಾಗಿ ಪ್ರಾರ್ಥಿಸಿದರು.
ನಂತರ ವಿನಾಯಕ ದೇವಸ್ಥಾನದಲ್ಲಿ ಕಟಪಾಡಿ ಪಡುಕುತ್ಯಾರಿನ ಶ್ರೀಮದ್ ಜಗದ್ಗುರು ಆನೆಗುಂದಿ ಸಂಸ್ಥಾನ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಮಾಜಿ ಮೇಯರ್‌ಗಳಾದ ಅಶ್ರಫ್, ಶಶಿಧರ ಹೆಗ್ಡೆ, ಉಮೇಶ್ ಆಚಾರ್ಯ, ಪಾಂಡೇಶ್ವರ ಬೆಳುವಾಯಿ ಸುಂದರ ಆಚಾರ್ಯ, ಲೋಕೇಶ್ ಆಚಾರ್ಯ ವೊಲ್ಗ, ಉದಯ ಜಿ ಆಚಾರ್ಯ, ಪ್ರಶಾಂತ್ ಜಿ ಆಚಾರ್ಯ, ಗೋಕುಲ್ ದಾಸ್ ಆಚಾರ್ಯ, ಹಾಗೂ ವಿಶ್ವಕರ್ಮ ಸಮಾಜ ಬಾಂಧವರು ಇದ್ದರು.