11:16 PM Friday18 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಸ್ಮಾರ್ಟ್ ಸಿಟಿಯ ಸರ್ವಿಸ್ ಬಸ್ಟ್ಯಾಂಡಲ್ಲಿ ಸಿಟಿ ಬಸ್ ಹತ್ತುವುದೇ ದೊಡ್ಡ ಸಾಹಸ.!

15/08/2021, 07:46

ಗಣೇಶ್ ಅದ್ಯಪಾಡಿ, ಮಂಗಳೂರು
info.reporterkarnataka.com

ಸ್ಮಾರ್ಟ್ ಸಿಟಿಯಾಗುವ ಕನಸು ಕಾಣುತ್ತಿರುವ ಮಂಗಳೂರು ಮಹಾನಗರದ ಹೃದಯ ಭಾಗದಲ್ಲಿರುವ ಸರ್ವೀಸ್ ಬಸ್ ಸ್ಟ್ಯಾಂಡ್‌ನ ಪರಿಸ್ಥಿತಿ ಮಾತ್ರ ಹೇಳತೀರದಷ್ಟು ಹದಗೆಟ್ಟು ಹೋಗಿದೆ.

ಸರ್ವಿಸ್ ಹಾಗೂ ಸಿಟಿ ಬಸ್‌ಗಳನ್ನು ಈಗ ಒಂದೇ ಕಡೆ ತಂಗುವಂತೆ ಮಾಡಿದ್ದು, ಇದು ಸರ್ವಿಸ್ ಹಾಗೂ ಸಿಟಿ ಬಸ್‌ಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಒಂದು ಕಡೆ ಸರಿಯಾದ ಮೂಲಭೂತ ವ್ಯವಸ್ಥೆಗಳೇ ಇರದ ಸರ್ವೀಸ್ ಬಸ್ಟ್ಯಾಂಡ್ ಅದರ ಪಕ್ಕದಲ್ಲೇ ಈಗ ಸಿಟಿ ಬಸ್‌ಗಳಿಗೆ ತಂಗುದಾಣ. ಕಿತ್ತೋದ ನೆಲದಲ್ಲಿ ಹರಡಿಕೊಂಡಿರುವ ಜಲ್ಲಿಕಲ್ಲುಗಳ ನಡುವೆ, ಸಣ್ಣ ಸಣ್ಣ ಹೊಂಡಗಳ ದಾಟಿ ರಾಶಿ ರಾಶಿ ಬಸ್‌ಗಳ ನಡುವೆ ತಮ್ಮ ಊರಿನ ಬಸ್ ಹತ್ತುವುದೇ ಪ್ರಯಣಿಕರಿಗೆ ದೊಡ್ಡ ಸಾಹಸ.

ಇನ್ನೊಂದು ಕಡೆಯಲ್ಲಿ ವಾಹನ ದಟ್ಟಣೆಗೆ ಕೂಡ ಈ ನಿರ್ಧಾರ ಕಾರಣವಾಗಿದ್ದು, ದಿನ ನಿತ್ಯ ಬಸ್‌ಗಳ ನಡುವೆ ಹಾಗೂ ಬಸ್‌ಸ್ಟ್ಯಾಂಡಿನ ಪಕ್ಕದಲ್ಲಿ ಬರುವ ವಾಹನ ಚಾಲಕರ ನಡುವಿನ ಜಗಳಕ್ಕೆ ಕಾರಣವಾಗ್ತ ಇದೆ.
ಇನ್ನು ಸಂಜೆ ಹಾಗೂ ಬೆಳಗ್ಗೆ ಒಂದೇ ವೇಳೆಯಲ್ಲಿ ಹಲವು ಬಸ್‌ಗಳು ನಿರ್ಗಮಿಸುವಾಗ ಇಕ್ಕಟ್ಟಿನ ಈ ದಾರಿಯಲ್ಲಿ ಪ್ರತಿ ದಿನವೂ ಟ್ರಾಫಿಕ್ ಜಾಮ್.

ಈ ಮೊದಲು ಸೆಬಾಸ್ಟಿಯನ್ ವೃತ್ತದಿಂದ ಪೆಟ್ರೋಲ್ ಪಂಪ್ ವರೆಗಿನ ರಸ್ತೆಯಲ್ಲಿ ಸಿಟಿ ಬಸ್‌ಗಳು ನಿಲ್ಲುತ್ತಿತ್ತು. ಆದರೆ ಈಗ ಸರ್ವಿಸ್ ಬಸ್‌ಸ್ಟ್ಯಾಂಡ್‌ಗೆ ಶಿಫ್ಟ್ ಮಾಡಿದ ಮೇಲೆ ಸಾಮಾನ್ಯ ಜನರು ಪರದಾಡುವಂತಾಗಿದೆ.

ಸರ್ವಿಸ್ ಬಸ್ಟ್ಯಾಂಡ್ ಪಕ್ಕದ ದಾರಿಯಲ್ಲೇ ಇತರ ಲಘುವಾಹನಗಳೂ ಓಡಾಡುತ್ತಿರುವುದರಿಂದ ಮತ್ತಷ್ಟು ವಾಹನ ದಟ್ಟನೆ ಇಲ್ಲಿ ಉಂಟಾಗ್ತ ಇದೆ. ಸರ್ವಿಸ್ ಬಸ್ಟ್ಯಾಂಡ್‌ನಲ್ಲಿ ಸ್ಥಳೀಯ ಪ್ರದೇಶದ ಮಾತ್ರವಲ್ಲದೆ ಉಡುಪಿ, ಕುಂದಾಪುರ ಸೇರಿದಂತೆ ಸಂಜೆ ಟ್ರಿಪ್ ಹೊರಡುವ ಬಳ್ಳಾರಿ, ಶಿವಮೊಗ್ಗ ಬಸ್‌ಗಳೂ ಅಲ್ಲದೆ ಸರಕಾರಿ ಬಸ್‌ಗಳೂ ನಿಂತಿರುತ್ತವೆ. ಇಷ್ಟೆಲ್ಲ ಬಸ್‌ಗಳಿಗೆ ಈ ಇಕ್ಕಟ್ಟಿನ ಜಾಗದಲ್ಲಿ ಅವಕಾಶ ಮಾಡಿಕೊಟ್ಟ ಪಾಲಿಕೆಗೆ ಬುದ್ಧಿ ಇದೆಯ ಎನ್ನುವ ಪ್ರಶ್ನೆಯೂ ಮೂಡುತ್ತದೆ

ಕಾರಿನಲ್ಲಿ ಓಡಾಡುವ ಅಧಿಕಾರಿಗಳಿಗೆ, ಆಡಳಿತ ವರ್ಗದವರಿಗೆ ಬಸ್‌ನಲ್ಲಿ ಓಡಾಡುವ ಜನರ ಪಾಡೇನು ತಿಳಿಯುತ್ತದೆ ಎನ್ನುವ ಮಾತು ಸ್ಥಳೀಯ ಜನರಿಂದ ಕೇಳಿ ಬರುತ್ತಿದೆ.

ಕೊರೊನಾ ಎರಡನೇ ಅಲೆಯ ಅನ್‌ಲಾಕ್ ಆದ ಬಳಿಕ ಆರಂಭದಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಇತ್ತು ಆಗ ಈ ಸಮಸ್ಯೆ ಅರಿವಿಗೆ ಬರಲಿಲ್ಲ ಆದರೆ ಈಗ ಬಹುತೇಕ ಬಸ್‌ಗಳು ರಸ್ತೆಗೆ ಇಳಿದಿದ್ದು, ಈಗ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಅತಿ ಶೀಘ್ರದಲ್ಲಿ ಈ ಸಮಸ್ಯೆಗೆ ಪರಿಹಾರ ದೊರಕುವಂತಾಗಲಿ.

ಇತ್ತೀಚಿನ ಸುದ್ದಿ

ಜಾಹೀರಾತು