ಇತ್ತೀಚಿನ ಸುದ್ದಿ
ಸಿಎಸ್ಐ ಕರ್ನಾಟಕ ಸೌಥರ್ನ್ ಡಯಾಸಿಸ್‌ಗೆ ಪದ್ಮರಾಜ್ ಭೇಟಿ: ಬಿಷಪ್ ರೈಟ್ ರೆವೆರೆಂಡ್ ಹೇಮಚಂದ್ರ ಕುಮಾರ್ ಅವರಿಂದ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ
08/04/2024, 21:22
ಮಂಗಳೂರು(reporterkarnataka.com): ದ.ಕ. ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಸಿಎಸ್ಐ ಕರ್ನಾಟಕ ಸೌಥರ್ನ್ ಡಯಾಸಿಸ್‌ಗೆ ಭೇಟಿ ನೀಡಿ ಬಿಷಪ್ ರೈಟ್ ರೆವೆರೆಂಡ್ ಹೇಮಚಂದ್ರ ಕುಮಾರ್ ಅವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಕಾರ್ಪೋರೆಟರ್‌ಗಳಾದ ನವೀನ್ ಡಿಸೋಜ, ಎ.ಸಿ.ವಿನಯರಾಜ್, ಪ್ರೊಟೆಸ್ಟೆಂಟ್ ಸಮುದಾಯದ ಶೆರಿಲ್ ಅಯೊನ, ಜೇಮ್ಸ್ ಪೀಟರ್ , ಶಶಿರಾಜ್ ಶೆಟ್ಟಿಯನ್ , ರಾಬಿನ್ ,ಜಯರಾಜ್ , ಕಿರಣ ಜೇಮ್ಸ್ , ವೀಣಾ ಬೆನಡಿಕ್ಟ್ ಮೊದಲಾದವರು ಉಪಸ್ಥಿತರಿದ್ದರು ..
ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನಲ್ ಸೊಸೈಟಿ ಮತ್ತು ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿಗೂ ಪದ್ಮರಾಜ್ ಅವರು ಭೇಟಿ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿ ರೆವೆರೆಂಡ್ ಎಚ್. ಎಂ. ವಾಟ್ಸನ್ ಅವರೊಂದಿಗೆ ಸಮಾಲೋಚಿಸಿದರು. ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಪ್ರೊಟೆಸ್ಟೆಂಟ್ ಸಮುದಾಯದ ಶೆರಿಲ್ ಅಯೊನ, ಜೇಮ್ಸ್ ಪೀಟರ್ , ರಾಬಿನ್ , ಜಯರಾಜ್ , ಕಿರಣ ಜೇಮ್ಸ್ , ವೀಣಾ ಬೆನಡಿಕ್ಟ್ ಮೊದಲಾದವರು ಈ ಸಂದರ್ಭದಲ್ಲಿಯೂ ಉಪಸ್ಥಿತರಿದ್ದರು.