ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಮಾರ್ಚ್ ತಿಂಗಳ ವಿಜೇತರಾಗಿ ಶಿವಮನ್ಯು ಎಸ್. ಭಟ್ ಹಾಗೂ ಶ್ರೀಮಾನ್ಯಾ ಭಟ್ ಆಯ್ಕೆ
07/04/2024, 13:33
ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮಾರ್ಚ್ ತಿಂಗಳ ಟಾಪರ್ ಆಗಿ ಶಿವಮನ್ಯು ಶ್ರೀಕಾಂತ್ ಭಟ್ ಹಾಗೂ ಶ್ರೀಮಾನ್ಯಾ ಭಟ್ ಅವರು ಆಯ್ಕೆಯಾಗಿದ್ದಾರೆ.
ಶಿವಮನ್ಯು ಶ್ರೀಕಾಂತ್ ಭಟ್ ಸುರತ್ಕಲ್ ನ ಎನ್ ಐಟಿಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ಶ್ರೀಕಾಂತ್ ಭಟ್ ಹಾಗೂ ಸ್ನೇಹಲತಾ ದಂಪತಿಯ ಪುತ್ರ.
ಯಕ್ಷಗಾನ, ಸಂಗೀತ, ಕೀಬೋರ್ಡ್, ಕರೋಕೆ ಹಾಡು ಹಾಗೂ ಕರಾಟೆ ಕಲಿಯುತ್ತಿದ್ದಾನೆ. ಕಟೀಲು ದುರ್ಗಾ ಮಕ್ಕಳ ಮೇಳದಲ್ಲಿ ತನ್ನ 5ನೇ ವಯಸ್ಸಿನಲ್ಲೇ ಗುರುಗಳಾದ ರಾಜೇಶ್ ಕಟೀಲು ಅವರಲ್ಲಿ ನಾಟ್ಯ ಅಭ್ಯಾಸವನ್ನು ಮಾಡುತ್ತಿದ್ದ. ಮೊದಲಿಗೆ ಲೀಲಾವತಿ ಬೈಪಾಡಿತ್ತಾಯರ ಬಳಿ ಯಕ್ಷಗಾನ ಭಾಗವತಿಕೆಯನ್ನು ಅಭ್ಯಾಸ ಮಾಡಿ ನಂತರ ದುರ್ಗಾ ಮಕ್ಕಳ ಮೇಳ ಕಟೀಲು ಇಲ್ಲಿ ಕೃಷ್ಣರಾಜ ನಂದಳಿಕೆ ಗುರುಗಳ ಬಳಿ ಭಾಗವತಿಕೆಯನ್ನು ಮುಂದುವರಿಸುತ್ತಿದ್ದಾನೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆ,(distiction )ಚಿತ್ರಕಲೆ ಜೂನಿಯರ್, ಸೀನಿಯರ್ ಗ್ರೇಡ್ ಪರೀಕ್ಷೆ(prathama), ಹಿಂದಿಯಲ್ಲಿ ರಾಷ್ಟ್ರಭಾಷಾ ಪ್ರವೀಣ ಪರೀಕ್ಷೆಯನ್ನು ಪೂರ್ಣಗೋಳಿಸಿದ್ದಾನೆ.
ರಾಮಾಯಣ (distiction ), ಮಹಾಭಾರತ ಪರೀಕ್ಷೆ ಪ್ರಥಮ, ಸಂಸ್ಕೃತದಲ್ಲಿ ಪ್ರಥಮ, ದ್ವಿತೀಯ, ತೃತೀಯ ಪರೀಕ್ಷೆಗಳನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾನೆ. ಯಕ್ಷಗಾನ ಭಾಗವತಿಕೆಯಲ್ಲಿ ಹೆಚ್ಚಿನ ಒಲವು ತೋರಿಸುತ್ತಿದ್ದು, ಈಗ ಬಾಲ ಭಾಗವತರಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾನೆ.
ಯಾವುದೇ ಯಕ್ಷಗಾನದ ಹಾಡನ್ನು ಒಳ್ಳೆ ರಾಗ, ಭಾವ, ಲಯದಲ್ಲಿ ಇಂಪಾಗಿ ಹಾಡಿ, ಹಲವು ಪ್ರಸಂಗಗಳಲ್ಲಿ ಭಾಗವತಿಕೆಯನ್ನು ಹಾಡಿ ಮೇರು ಭಾಗವತರು ಹಾಗೂ ತನ್ನ ಗುರುಗಳಲ್ಲಿ ಭೇಷ್ ಏನಿಸಿಕೊಂಡಿದ್ದಾನೆ.
ದೇವಿ ಮಹಾತ್ಮೆ, ತಾರಕಾಸುರ ವಧೆ, ಇಂದ್ರಜಿತ್ ಕಾಳಗ, ಚೌತಿಯ ಚಂದ್ರ ಪ್ರಸಂಗಗಳಲ್ಲಿ ರಂಗದಲ್ಲಿ ಮೂರು ಗಂಟೆಗಳ ಕಾಲ ಭಾಗವತಿಕೆ ಹಾಡಿ ಎಲ್ಲರ ಗಮನವನ್ನು ಸೆಳೆದಿದ್ದಾನೆ. ಭೀಷ್ಮ ಪರ್ವ, ಕರ್ಣಾರ್ಜುನ ಕಾಳಗ, ಶನೀಶ್ವರ ಮಹಾತ್ಮೆ ತಾಳ ಮದ್ದಳೆಗಳಲ್ಲಿ ಭಾಗವತಿಕೆಯನ್ನು ಹಾಡಿದ್ದಾನೆ. ಕಟೀಲು ದುರ್ಗಾಂಬಿಕೆ ಹಾಗೂ ಮಠoತ ಬೆಟ್ಟು ಮಹಿಷಮರ್ದಿನಿ ದೇವರ ಕುರಿತು ಸ್ವತಃ ತಾನೇ ಹಾಡನ್ನು ರಚಿಸಿ ಹಾಡಿದ್ದಾನೆ. ಈತನಿಗೆ
ಕ್ರಿಕೆಟ್, ಫುಟ್ಬಾಲ್ ಎಂದರೆ ಬಹಳ ಇಷ್ಟ. ಶಾಲಾ ಮಟ್ಟದಲ್ಲಿ best ಬೌಲರ್ ಹಾಗೂ best all rounder ಪ್ರಶಸ್ತಿಯನ್ನು ಪಡೆದು ಕೊಂಡಿದ್ದಾನೆ. AICS 2023 ಫುಟ್ಬಾಲ್ ಟೂರ್ನಮೆಂಟ್ ನಲ್ಲಿ ಬೆಸ್ಟ್ ಗೋಲ್ ಅವಾರ್ಡ್ ಪಡೆದುಕೊಂಡಿದ್ದಾನೆ. ಈ ವರ್ಷದ ಶಾಲಾ ಬೆಸ್ಟ್ ಆಲ್ರೌಂಡರ್ ಮತ್ತು ಬೆಸ್ಟ್ ಅಥ್ಲೆಟ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ.
2022 ರಾಜ್ಯಮಟ್ಟದ ಆದಿ ಗ್ರಾಮೋತ್ಸವ ಪ್ರತಿಭಾ ಸಿರಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ.
ಬೆಂಗಳೂರಿನ ಶಾರದಾ ಕಲೋತ್ಸವ ಫೇಸ್ಬುಕ್ ಪೇಜ್ ಇವರ ಪ್ರಥಮ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಕೊಡಲಾಗುವ ಮಕ್ಕಳ ವಿಭಾಗದ ಶಾರದಾ ಕಲೋತ್ಸವ 2023-24 ಪ್ರಶಸ್ತಿ ಗೆ ಆಯ್ಕೆಯಾಗಿದ್ದಾನೆ. ತನ್ನ ಸಹೋದರ ರುದ್ರಮನ್ಯು ವಿನ ಜೊತೆ ಸೇರಿ ಒಂದೇ ವೇದಿಕೆಯಲ್ಲಿ ನೀಡಿದ ಕಾರ್ಯಕ್ರಮಗಳು ಹಲವಾರು. ಕಟೀಲು 6 ಮೇಳಗಳಲ್ಲಿ ಬಾಲಗೋಪಾಲ, ಮುಖ್ಯ ಸ್ತ್ರೀ ವೇಷ, ಪೀಠಿಕ ಸ್ತ್ರೀ ವೇಷ, ದೇವೇಂದ್ರ ಬಲ ಜೊತೆಯಾಗಿ ಇಬ್ಬರು ಪ್ರದರ್ಶನವನ್ನು ನೀಡಿದ್ದಾರೆ.
ಆಟೋಟ ಸ್ಪರ್ಧೆಗಳು, ಕರಾಟೆ, ಯಕ್ಷಗಾನ, ಸಂಗೀತ, ಮೊದಲಾದ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ಗಳಿಸಿ ಸುಮಾರು 100ಕ್ಕೂ ಹೆಚ್ಚು ಪ್ರಶಸ್ತಿ ಪಾತ್ರ ಹಾಗೂ ಫಲಕ, ಮೆಡಲ್ ಗಳನ್ನು ತಮ್ಮದಾಗಿಸಿಕೊಂಡಿದ್ದಾನೆ. ಟಿವಿ
ಚಾನೆಲ್ ಗಳಲ್ಲೂ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಿದ್ದಾನೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಗೆ ಸೇರಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾನೆ. ಆರದಿರಲಿ ಬದುಕು ಆರಾಧನಾ ಎಂಬ ಸಂಸ್ಥೆ ಗೆ ಸೇರಿ ಅನಾರೋಗ್ಯ ಪೀಡಿತರಿಗೆ ಪ್ರತಿ ತಿಂಗಳು ಸಹಾಯಧನವನ್ನು ನೀಡುವ ಮನಸ್ಸನ್ನು ಹೊಂದಿದ್ದಾನೆ. ಶಿವಮನ್ಯು ಮುಂದೆ ಸಿಎ ಆಗಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದಾನೆ.
ಶ್ರೀಮಾನ್ಯಾ ಭಟ್ ಕಡಂದಲೆ 5 ವರ್ಷದ ಬಹುಮುಖ ಪ್ರತಿಭೆಯ ಪುಟಾಣಿ. ಈಕೆ
ದಿ.ಕೆ.ಜಿ. ನಾರಾಯಣ ಭಟ್ ಕಡಂದಲೆ ಮತ್ತು ರಾಧಾ ಭಟ್ ಹಾಗೂ ಕಟೀಲು ಅನಂತ ಪದ್ಮನಾಭ ಆಸ್ರಣ್ಣ ದಂಪತಿಯ ಮೊಮ್ಮಗಳು. ಕಡಂದಲೆ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀವಿದ್ಯಾ ಭಟ್ ದಂಪತಿ ಪುತ್ರಿ.
ಶ್ರೀಮಾನ್ಯಾ ಭಟ್ ಕಡಂದಲೆ ಕಟೀಲು ಶ್ರೀದುರ್ಗಾಪರಮೇಶ್ವರೀ ಆಂಗ್ಲ ಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿನಿ. ಇವಳು ಭಗವದ್ಗೀತೆ ತರಬೇತಿಯನ್ನು ಪಡೆಯುತ್ತಿದ್ದಾಳೆ. ಈಕೆ ಸಂಗೀತ, ಭರತ್ಯನಾಟ್ಯ, ನೃತ್ಯ, ಸಿನೆಮಾ ಹಾಡು, ಭಗವದ್ಗೀತೆ, ವಿಷ್ಣು ಸಹಸ್ರನಾಮ, ಕ್ರೀಡೆ, ದೇವರ ಮಂತ್ರಗಳು ಸಹಿತ ವಿವಿಧ ಕ್ಷೇತ್ರಗಳಲ್ಲಿ ಅಪಾರ ಭರವಸೆ ಮೂಡಿಸಿರುವ ಪ್ರತಿಭೆ.
ಈಗಾಗಲೇ ಅರವತ್ತು ಸಂವತ್ಸರಗಳು, ಹನ್ನೆರಡು ತುಳು ಮಾಸಗಳು, ಇಪ್ಪತ್ತೇಳು ನಕ್ಷತ್ರಗಳು, ವಾರದ ಏಳು ಪ್ರತಿನಾಮಗಳು , ತಿಥಿಗಳು ಮಾಸಗಳು, ಕಥೆಗಳು, ಸುಭಾಷಿತಗಳು, ಭಾಷಣ, ಮಾತುಗಾರಿಕೆ ಹಾಗೂ ಯಕ್ಷಗಾನದಲ್ಲಿ ವಿಶೇಷ ಆಸಕ್ತಿಯನ್ನು ಹೊ೦ದಿರುತ್ತಾಳೆ. ಹೀಗೆ ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಶ್ರೀಮಾನ್ಯಾ 2022- 23ರಲ್ಲಿ ನಲ್ವತ್ತಕ್ಕೂ ಹೆಚ್ಚು ವೇದಿಕೆಯಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ 3೦ಕ್ಕೂ ಹೆಚ್ಚು ಬಹುಮಾನ ಪಡೆದುಕೊಂಡಿದ್ದಾಳೆ. ಪ್ರತೀದಿನ ವಾಯ್ಸ್ ಆಫ್ ಆರಾಧನಾದಲ್ಲಿ ಭಾಗವಹಿಸಿ ನವಂಬರ್ ಹಾಗೂ ಜನವರಿ ಹಾಗೂ ಮಾರ್ಚ್ ತಿಂಗಳ ವಿಜೇತಳಾಗಿದ್ದಾಳೆ. ಫೇಸ್ಬುಕ್ನಲ್ಲಿ ಜನ ಮೆಚ್ಚಿದ ಸೂಪರ್ ಸ್ಟಾರ್ ಮೆಚ್ಚುಗೆ ಪಡೆದಿದ್ದಾಳೆ. ಕಿನ್ನಿಗೋಳಿ ಯುಗಪುರುಷದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲರ ಮೆಚ್ಚುಗೆ ಪಡೆದು ಛೋಟಾ ಗಾಯಕಿ ಗೌರವವನ್ನು ಪಡೆದಿದ್ದಾಳೆ. ಸಂಸ್ಕೃತ ಸಿರಿ , ದಾಸ್ ಕುಡ್ಲ ಯುಟ್ಯೂಬ್ ಚಾನಲ್ , ದೈಜಿ ವರ್ಲ್ಡ್ ಟಿವಿ ಕಾರ್ಯಕ್ರಮ, ಸ್ಪಂದನ ಟಿವಿ, ನಮ್ಮ ಕುಡ್ಲ ಟಿವಿ, ಕಾರ್ಯಕ್ರಮ, ಶಿವಳ್ಳಿ ಸ್ಪಂದನ ಮಂಗಳೂರು ವಲಯ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜು ನುಡಿಹಬ್ಬ, ಹೀಗೆ ಹಲವು ವೇದಿಕೆಗಳಲ್ಲಿ ಸ್ಮರಣಿಕೆ ,ಉಡುಗೊರೆ, ಸನ್ಮಾನಗಳು ಲಭಿಸಿವೆ. ಜೀ ಕನ್ನಡದಲ್ಲಿ ಸರಿಗಮಪ ಫೈನಲ್ ರೌಂಡ್ ಆಡೀಷನ್ ವರೆಗೆ ಹೋಗಿದ್ದಾಳೆ. ಛೋಟಾ ಚಾಂಪಿಯನ್ ಆಡಿಷನ್ ಗೆ ಹೋಗಿದ್ದಾಳೆ. ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಬೆಳದಿಂಗಳ ಸಮ್ಮೇಳನ ಸಮಿತಿ , ಮಕ್ಕಳ ರಾಜ್ಯೋತ್ಸವ ಪ್ರಶಸ್ತಿ, ಅಕ್ಷರ ದೀಪ, ಸಾಹಿತ್ಯ ಕಲಾ ವೇದಿಕೆ, ಧಾರವಾಡ- ಬೆಳಗಾವಿ , ರಾಷ್ಟ ಮಟ್ಟದ ಒನ್ಲೈನ್ ಪ್ರತಿಭಾನ್ವೇಷಣೆಯಲ್ಲಿ ಸ್ವರ್ಣ ಕಲಾ ಪ್ರಶಸ್ತಿ , ವಿಜಯ ಪಥ ಯು ಟ್ಯೂಬ್ ಚಾನೆಲ್ ನಲ್ಲಿ ನಡೆದ ಸಂಸ್ಕೃತ ಪಠಣ ಮತ್ತು ಅಭಿನಯ ಗೀತೆಯಲ್ಲಿ ಛೋಟಾ ಚಾಂಪಿಯನ್ ಪ್ರಶಸ್ತಿ, ವಿಜಯ ಪಥ ಪ್ರತಿಭಾ ಅನ್ವಷಣೆ ಸಾಧಕ ರತ್ನ ಪ್ರಶಸ್ತಿ, ಸೇವಾರತ್ನ ಪ್ರಶಸ್ತಿ ಲಭಿಸಿದೆ. ಅಜೆಕಾರಿನಲ್ಲಿ ಬಾಲ ಪ್ರತಿಭೋತ್ಸವ ಮಕ್ಕಳ ಸಿರಿ ಗೌರವ, ಸನ್ಮಾನ ಸಿಕ್ಕಿರುತ್ತದೆ. 2022-23 ನೇ ಸಾಲಿನಲ್ಲಿ LKG ತರಗತಿ ಯಲ್ಲಿ ಓದಿನಲ್ಲಿ First rank ಪಡೆದಿರುತ್ತಾಳೆ. ಚಿಣ್ಣರ ದನಿ ರೇಡಿಯೋ ಮಣಿಪಾಲ ದಲ್ಲಿ ಪ್ರೋಗ್ರಾಮ್ ಕೊಟ್ಟಿರುತ್ತಾಳೆ ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ಬಹುಮಾನ ಉಡುಗೊರೆ, ಸನ್ಮಾನ , ಗೌರವವನ್ನು ಪಡೆದಿರುತ್ತಾಳೆ.