ಇತ್ತೀಚಿನ ಸುದ್ದಿ
ಸಚಿವ ಸ್ಥಾನದ ಮೇಲೆ ನನಗೆ ಆಸೆ ಇಲ್ಲ; ಮೈತ್ರಿ ಸರಕಾರ ಪತನಗೊಳಿಸಿದ್ದು ಸಂತೋಷ ಉಂಟು ಮಾಡಿದೆ: ರಮೇಶ್ ಜಾರಕಿಹೊಳಿ
14/08/2021, 13:38

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಸಚಿವ ಸ್ಥಾನದ ಮೇಲೆ ನನಗೆ ಆಸೆಯಿಲ್ಲ. ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ದನಿದ್ದೇನೆ.ಮಂತ್ರಿಗಿರಿಗಿಂತಲೂ ಮೈತ್ರಿ ಸರಕಾರನ್ನು
ಪತನಗೊಳಿಸಿದ್ದು ನನಗೆ ಸಂತೋಷ ಉಂಟು ಮಾಡಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಅಥಣಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೂರರ ವಿರುದ್ಧ ಯಾವಾಗಲೂ ಷಡ್ಯಂತ್ರಗಳು ಇದ್ದೇ ಇರುತ್ತವೆ. ಅದನ್ನೆಲ್ಲ ಮೆಟ್ಟಿ ನಿಂತು ಗಟ್ಟಿಯಾಗಿದ್ದೇವೆ
ಅಥಣಿಗೆ ನಾನು ಇಲ್ಲಿನ ನೀರಾವರಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯದ ಕುರಿತು ಭೇಟಿ ನೀಡಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ. ನೀರಾವರಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುವ ಸಂಬಂಧ ಅವಲೋಕನ ನಡೆಸಲು ಬಂದಿದ್ದೇನೆ ಎಂದರು.
ಶಾಸಕ ಮಹೇಶ್ ಕುಮಟಳ್ಳಿ ಯವರಿಂಲೇ ನಾನು ಮಂತ್ರಿಯಾದೆ. ಮುಂದಿನ ದಿನಗಳಲ್ಲಿ ಮಹೇಶ ಕುಮಟಳ್ಳಿಗೆ ಒಳ್ಳೆಯ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಜಾರಕಿಹೊಳಿ ನುಡಿದರು.