ಇತ್ತೀಚಿನ ಸುದ್ದಿ
ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಗೆಲುವಿಗೆ ರಕ್ತದಾನ
03/04/2024, 18:10
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಕೋಟಾ ಶ್ರೀನಿವಾಸ ಪೂಜಾರಿ ಗೆಲುವಿಗಾಗಿ ರಕ್ತದಾನ ಆಯೋಜಿಸಲಾಯಿತು.
ಕೋಟಾ ನಾಮಪತ್ರ ಸಲ್ಲಿಸುವ ವೇಳೆಯೇ ರಕ್ತದಾನ ಮಾಡಲಾಯಿತು. ಪರಿಶುದ್ಧ ವ್ಯಕ್ತಿತ್ವದ ಕೋಟಾ ಗೆಲುವಿಗಾಗಿ ಹಾರೈಸಿ ರಕ್ತದಾನ ಆಯೋಜಿಸಲಾಯಿತು. ಎಸ್.ಸಿ.ಮೋರ್ಚಾ ರಾಜ್ಯ ವಕ್ತಾರ ಶೃಂಗೇರಿ ಶಿವಣ್ಣ ಎಂಬುವರಿಂದ ರಕ್ತದಾನ ನಡೆಯಿತು. ಕೋಟಾ ಶ್ರೀನಿವಾಸ ಪೂಜಾರಿ ಗೆದ್ದರೆ ಪ್ರಧಾನಿ ಮೋದಿ ಗೆದ್ದಂತೆ.
ಕೋಟಾ ಗೆಲುವಿಗಾಗಿ ನಾಮಪತ್ರ ಸಲ್ಲಿಸುವ ವೇಳೆಯೇ ರಕ್ತದಾನವನ್ನು ಶೃಂಗೇರಿ ಮಠದ ಆಸ್ಪತ್ರೆ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಾಡಲಾಯಿತು.