6:41 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಬಡವರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಬಡವರ ಬಂಧು ಪದ್ಮರಾಜ್ ಆರ್: ಪುತ್ತೂರು ಶಾಸಕ ಅಶೋಕ್ ರೈ ಶ್ಲಾಘನೆ

01/04/2024, 17:59

ಪುತ್ತೂರು(reporterkarnataka.com): ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ ನೀಡಿದರು.


ಅಬ್ಬಾಸ್ ಫೈಝಿ ಪುತ್ತಿಗೆ ಪ್ರಾರ್ಥನೆ ನೆರವೇರಿಸಿ, ಪದ್ಮರಾಜ್ ಗೆಲುವಿಗೆ ಶುಭಹಾರೈಸಿದರು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ನಮ್ಮ ಅಭ್ಯರ್ಥಿ ಪೇಟೆಯಲ್ಲಿ ಬೆಳೆದವರಲ್ಲ. ಹಳ್ಳಿಯ ಜೀವನ ಕಂಡವರು. ಕಷ್ಟ, ಬಡತನದಲ್ಲೇ ಬೆಳೆದು ಬಂದಿದ್ದಾರೆ. ಆದ್ದರಿಂದ ಜನರ ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ಮಾಡುವವರು. ಆದ್ದರಿಂದ ಅವರನ್ನು ಗೆಲ್ಲಿಸಿಕೊಡಬೇಕು. ಇದಕ್ಕಾಗಿ ಗ್ಯಾರೆಂಟಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ. ನೀವೆಲ್ಲಾ ಜನರ ಮನೆಗೆ ಹೋಗಿ, ಮತ ಕೇಳಿದ ಕಾರಣ ನಾನು ಶಾಸಕನಾಗುವಂತಾಯಿತು. ಅದೇ ರೀತಿ ಪದ್ಮರಾಜ್ ಅವರನ್ನು ಅತ್ಯಧಿಕ ಮತದಿಂದ ಗೆಲ್ಲಿಸಿಕೊಡಬೇಕು ಎಂದು ಹೇಳಿದರು.
ಅಭ್ಯರ್ಥಿ ಪದ್ಮರಾಜ್ ಆರ್. ಮಾತನಾಡಿ, ಚುನಾವಣೆ ಎಂದ ಮಾತ್ರಕ್ಕಷ್ಟೇ ಎಲ್ಲಾ ಪ್ರಾರ್ಥನಾಲಯಗಳಿಗೆ ತೆರಳುತ್ತಿಲ್ಲ. ಇತರ ಸಮಯದಲ್ಲೂ ಎಲ್ಲಾ ಪ್ರಾರ್ಥನಾ ಕೇಂದ್ರಗಳಿಗೆ ತೆರಳುವ ಸಂಪ್ರದಾಯ ಬೆಳೆಸಿಕೊಂಡವನು ನಾನು. ಈ ಚುನಾವಣೆಯ ಮೂಲಕ ಎಲ್ಲಾ ಜನರ ಸೇವೆ ಮಾಡುವ ಭಾಗ್ಯ ಸಿಗುವಂತಾಗಲಿ ಎಂದರು.
ಮಸೀದಿ ಸಮಿತಿ ಅಧ್ಯಕ್ಷ ಎಲ್.ಟಿ. ರಝಾಕ್ ಹಾಜಿ ಮಾತನಾಡಿ, ಉತ್ತಮ ಅಭ್ಯರ್ಥಿ ನಮಗೆ ಲಭಿಸಿದ್ದಾರೆ. ಜಾತಿ, ಮತ, ಬೇಧ ನೋಡದೇ ಅವರನ್ನು ಗೆಲ್ಲಿಸಿಕೊಡಬೇಕು ಎಂದರು.
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ. ವಿಶ್ವನಾಥ ರೈ, ಡಾ. ರಾಜಾರಾಮ್, ಕಾರ್ಯದರ್ಶಿ ಯಕೂಬ್ ಖಾನ್, ನೂರುದ್ದೀನ್ ಸಾಲ್ಮಾರ, ಹಸನ್ ಹಾಜಿ, ಶಕೂರ್ ಹಾಜಿ, ಎಂ.ಎಸ್. ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು