5:56 AM Saturday15 - August 2026
ಬ್ರೇಕಿಂಗ್ ನ್ಯೂಸ್
ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ

ಇತ್ತೀಚಿನ ಸುದ್ದಿ

ದ.ಕ. ಲೋಕಸಭೆ ಕ್ಷೇತ್ರದಿಂದ ಪದ್ಮರಾಜ್ ಆರ್., ಉಡುಪಿಯಿಂದ ಕೋಟ, ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್ ಗೆಲ್ಲಿಸಿ: ಸತ್ಯಜಿತ್ ಸುರತ್ಕಲ್

01/04/2024, 16:10

ಮಂಗಳೂರು(reporterkarnataka.com):ರಾಜಕೀಯವನ್ನು ಬದಿಗೆ ಸರಿಸಿ ದ.ಕ. ಲೋಕಸಭೆ ಕ್ಷೇತ್ರದಿಂದ ಪದ್ಮರಾಜ್ ಆರ್., ಉಡುಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ಬಿಲ್ಲವ ಸಮುದಾಯಕ್ಕೆ ಬಲ ನೀಡುವಂತೆ ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಸಭೆಗೆ ಬಿಜೆಪಿ ಟಿಕೆಟ್ ತಪ್ಪಿದ ಬಗ್ಗೆ ಅಸಮಾಧಾನ ಹೊರ ಹಾಕಿದರು.
ರಾಜ್ಯದಲ್ಲಿ ಬಿಜೆಪಿ ಇಲ್ಲ, ಬಿ.ಎಲ್. ಸಂತೋಷರ ಪಾರ್ಟಿ ಇತ್ತು. ಈಗ ಇಲ್ಲ. ಈಗ ಯಡಿಯೂರಪ್ಪರ ಪಾರ್ಟಿ ಇರೋದು. ಅವರ ಹಿಂದೆ ಯಾರು ಜೈಕಾರ ಹಾಕುತ್ತಾರೋ, ಅವರಿಗೆ ಬಕೆಟ್ ಹಿಡಿಯುತ್ತಾರೋ ಅವರಿಗೆ ಮಾತ್ರ ಅವಕಾಶ ಎಂದು
ಸತ್ಯಜಿತ್ ಸುರತ್ಕಲ್ ಆಕ್ರೋಶ ವ್ಯಕ್ತಪಡಿಸಿದರು.
ನಾನು ಹುಟ್ಟಿದ ಜಾತಿ, ಊರು ಸರಿಯಿಲ್ಲ. ಅದಕ್ಕಾಗಿ ಟಿಕೆಟ್ ತಪ್ಪಿದೆ. ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಬಂಟ ಸಮುದಾಯದಲ್ಲಿ ಹುಟ್ಟಿದರೆ ನನಗೂ ಟಿಕೆಟ್ ಸಿಕುತ್ತಿತ್ತು. ಶೂದ್ರ ಸಮಾಜದಲ್ಲಿ ಹುಟ್ಟಿದ್ದರಿಂದ ನನಗೆ ಸೇವೆ ಮಾಡಲು ಮಾತ್ರ ಅವಕಾಶ. ಶೂದ್ರರು ತಾವಾಗಿ ಸ್ಥಾನ ಕೇಳಲು ಹೋಗಬಾರದು. ನಾಯಕರು ಹೇಳಿದಂತೆ, ಅವರಿಗೆ ಬಕೆಟ್ ಹಿಡಿದರೆ ಅವಕಾಶಗಳು ಸಿಗುತ್ತದೆ. ವೈಯಕ್ತಿಕ ಶಕ್ತಿ- ಸಾಮರ್ಥ್ಯ ಇರೋರಿಗೆ ಅವಕಾಶ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಿ ಬಿಲ್ಲವರಿಗೆ ಅನ್ಯಾಯ ಮಾಡಿದೆ. ಕೋಟರು ಎಂಎಲ್ಸಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ. ಇಂತಹ ಸ್ಥಾನ ನಮ್ಮ ಸಮಾಜಕ್ಕೆ ಮತ್ತೆ ಸಿಗಲು ಸಾಧ್ಯವಿಲ್ಲ. ಉಡುಪಿ ಯಲ್ಲಿ ಪ್ರಾಮಾಣಿಕ ಸೇವೆ ಮಾಡಿದ ಬೇರೆಯವರು ಇದ್ದರು. ಅವರಿಗೆ ನೀಡುತ್ತಿದರೆ ಬಿಲ್ಲವ ಸಮಾಜಕ್ಕೆ ನ್ಯಾಯ ಸಿಗುತ್ತಿತ್ತು.ಈಗ ಬಿಜೆಪಿಯಿಂದ ಬಿಲ್ಲವ ಸಮಾಜಕ್ಕೆ ಅನ್ಯಾಯವಾಗಿದೆ ಎಂದು ಅವರು ನುಡಿದರು.
ಅನೇಕ ವರ್ಷಗಳ ಬಳಿಕ ಬಿಲ್ಲವ ಸಮಾಜಕ್ಕೆ ಕರಾವಳಿಯಲ್ಲಿ ಮೂವರಿಗೆ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಸಿಕ್ಕಿದೆ.
ದ.ಕ. ದಲ್ಲಿ ಪದ್ಮರಾಜ್, ಉಡುಪಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಬಿಲ್ಲವ ಸಮುದಾಯಕ್ಕೆ ಬಲ ನೀಡಬೇಕು. ಬಿಲ್ಲವ ಬಾಂಧವರು ಪಕ್ಷ ಬದಿಗೊತ್ತಿ ಈ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಸತ್ಯಜಿತ್ ಸುರತ್ಕಲ್ ಕರೆ ಕೊಟ್ಟರು.

ಇತ್ತೀಚಿನ ಸುದ್ದಿ

ಜಾಹೀರಾತು