1:44 AM Thursday17 - September 2026
ಬ್ರೇಕಿಂಗ್ ನ್ಯೂಸ್
ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:…

ಇತ್ತೀಚಿನ ಸುದ್ದಿ

ಕೆಂಜಾರು ಗೋಶಾಲೆಗೆ ಕಾಂಗ್ರೆಸ್ ಅಭ್ಯರ್ಥಿ ಭೇಟಿ: ಗೋವುಗಳ ನೋವಿಗೆ ಮರುಗಿದ ಪದ್ಮರಾಜ್ ಆರ್.

30/03/2024, 20:48

ಮಂಗಳೂರು(reporterkarnataka.com):500ಕ್ಕೂ ಅಧಿಕ ಗೋವುಗಳು… ಆಳುದ್ದದ ಹಟ್ಟಿಯಲ್ಲಿ ಸಾವಕಾಶವಾಗಿ ನಿಲ್ಲಲು ಜಾಗವೇ ಇಲ್ಲ. ಇನ್ನು, ಮೇವು ಮೇಯಲು ಜಾಗವೆಲ್ಲಿ?, ಆರೋಗ್ಯಪೂರ್ಣವಾಗಿ ದಿನ ನಿರ್ವಹಣೆಯ ಮಾತೆಲ್ಲಿ?, ತಳಿ ಅಭಿವೃದ್ಧಿ ಮಾಡಲು ಕೇಂದ್ರವೆಲ್ಲಿ…?
ಇದು ಮಂಗಳೂರಿನ ಬಜಪೆ ಕೆಂಜಾರು ಕಪಿಲಾ ಪಾರ್ಕ್ ಗೋಶಾಲೆಯ ಕಥೆ – ವ್ಯಥೆ.


ಲೋಕಸಭಾ ಚುನಾವಣೆಯ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಶುಕ್ರವಾರ ಸಂಜೆ ಕಪಿಲಾ ಪಾರ್ಕ್ ಗೋಶಾಲೆಗೆ ಭೇಟಿ ನೀಡಿದರು. ನಿಲ್ಲಲು ಜಾಗವಿಲ್ಲದೇ ಒಂದರ ತಲೆ ಇನ್ನೊಂದು ಗೋವಿನ ಮೇಲೆ ಇರುವಂತೆ ಆಹಾರ ಮೇಯುತ್ತಿದ್ದ ಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದರು. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸಂಬಂಧಪಟ್ಟ ಅಧಿಕಾರಿ ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಒಟ್ಟು 36 ಸೆಂಟ್ಸ್ ಜಾಗದಲ್ಲಿ 500ಕ್ಕೂ ಅಧಿಕ ಗೋವುಗಳು ನಿಲ್ಲಲಾಗದೇ ಹೊರಗೋಡಿ ಬರಲು ತವಕಿಸುತ್ತಿದ್ದವು. ಹಟ್ಟಿಯ ಹೊರಗಡೆ ಎಳೆ ಕರುಗಳು ದಿಕ್ಕು ಕಾಣದೆ ನಿಂತಿದ್ದವು.
ಗೋಶಾಲೆಯ ಪ್ರಕಾಶ್ ಅವರು ಗೋಶಾಲೆಯ ದೈನವೀ ಪರಿಸ್ಥಿತಿಯನ್ನು ವಿವರಿಸಿದರು. ಹಿಂದೂ ಪ್ರತಿಪಾದಕರು ಎಂದು ಹೇಳಿಕೊಂಡವರು ಭರವಸೆ ನೀಡಿದ್ದು ಬಿಟ್ಟರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು