ಇತ್ತೀಚಿನ ಸುದ್ದಿ
ಚಳ್ಳಕೆರೆ ತಾಲೂಕು ಕುಡಿಯುವ ನೀರಿನ ಸಮಸ್ಯೆ: 40 ಗ್ರಾಪಂ ಪಿಡಿಒಗಳ ತುರ್ತು ಸಭೆ; 21 ರೀಬೋರ್ ಮಾಡಿಸಲು ಸೂಚನೆ
27/03/2024, 22:37

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಕುಡಿಯುವ ನೀರು ನಿರ್ವಹಣೆ ಕುರಿತಾದ ತುರ್ತು ಸಭೆ ಚಳ್ಳಕೆರೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ನಡೆಯಿತು.
ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು-ನೈರ್ಮಲ್ಯ ಇಲಾಖೆ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ತಾಲ್ಲೂಕಿನ 40 ಗ್ರಾಪಂಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು. ಒಟ್ಟು 7 ಗ್ರಾಮಗಳಲ್ಲಿ ಖಾಸಗಿ ಜಮೀನಿನಿಂದ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರನ್ನು ಪೂರೈಸಲಾಗುತ್ತಿದೆ. ವಿವಿಧ ಗ್ರಾಮಗಳಲ್ಲಿ ಒಟ್ಟು 6500 ಮೀಟರ್ ಹೊಸ ಪೈಪ್ ಲೈನ್ ನಿರ್ಮಿಸುವ ಅಗತ್ಯವಿದೆಯೆಂದು ಪಂ.ಅ.ಅಧಿಕಾರಿಗಳು ಮಾಹಿತಿ ನೀಡಿದರು.
ಒಟ್ಟು 21 ರೀಬೋರ್ ಮಾಡಿಸುವ ಅಗತ್ಯವಿದೆಯೆಂದು ಪಂ.ಅ.ಅಧಿಕಾರಿಗಳು ಮಾಹಿತಿ ನೀಡಿದಾಗ, ಸದರಿ ಬೋರ್ ವೆಲ್ ಗಳನ್ನು ರೀ ಬೋರ್ ಮಾಡುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು-ನೈರ್ಮಲ್ಯ ಇಲಾಖೆರವರಿಗೆ ಸೂಚಿಸಲಾಯಿತು.
ಕೂಲಿಕಾರರು ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿದಲ್ಲಿ ತಕ್ಷಣ ಕೆಲಸ ನೀಡಬೇಕೆಂದು ಪಂ.ಅ.ಅಧಿಕಾರಿಗಳಿಗೆ ಸೂಚಿಸಲಾಯಿತು.