3:36 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಕುಲಶೇಖರದ ಹೋಲಿ ಕ್ರಾಸ್ ಚರ್ಚಿನಲ್ಲಿ ‘ಶಿಲುಬೆಯ ಹಾದಿ’ ಸಂಪನ್ನ: 12 ಚರ್ಚುಗಳ ಸಹಭಾಗಿತ್ವ

27/03/2024, 16:13

ಮಂಗಳೂರು(reporterkarnataka.com): ನಗರದ ಕುಲಶೇಖರದ ಹೋಲಿ ಕ್ರಾಸ್ ಚರ್ಚಿನಲ್ಲಿ ನಗರದ ಸಿಟಿ ವಲಯದ 12 ಚರ್ಚುಗಳ ಸುಮಾರು 200ಕ್ಕೂ ಮಿಕ್ಕಿ ಕಲಾವಿದರು ಹಾಗೂ ನಿರೂಪಕರಿಂದ “ಶಿಲುಬೆಯ ಹಾದಿ” (ಖುರ್ಸಾಚಿ ವಾಟ್) ಮಾರ್ಚ್ 25ರಂದು ನಡೆಸಲಾಯಿತು.
ಕಾರ್ಡೆಲ್ ಚರ್ಚಿನ ವಠಾರದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು. ನಗರದ ಕುಲಶೇಖರ (ಕಾರ್ಡೆಲ್), ವಾಮಂಜೂರು, ಪಾಲ್ದಾನೆ, ಬೊಂದೇಲ್, ದೇರೇಬೈಲು, ನೀರುಮಾರ್ಗ, ಕೆಲರೈ, ಬಜ್ಜೊಡಿ, ಕಪಿತಾನಿಯೋ, ಬಜಾಲ್, ಪೆರ್ಮಾಯಿ, ಶಕ್ತಿನಗರ ಚರ್ಚುಗಳ ಕಲಾವಿದರು ಹಾಗೂ ಪ್ರತಿ ಚರ್ಚಿನಿಂದ ಪ್ರತಿ ನಿಲ್ದಾಣಕ್ಕೆ (ಸ್ಟೇಶನ್) 3 ಜನ ನಿರೂಪಕರು ಈ ಶಿಲುಬೆಯ ಹಾದಿಯನ್ನು ನಡೆಸಿದರು. 12 ಚರ್ಚುಗಳ ಎಲ್ಲಾ ಭಕ್ತವೃಂದದವರು ಶಿಲುಬೆಯ ಹಾದಿಯಲ್ಲಿ ಭಾಗವಹಿಸಿದರು. ಸುಮಾರು 7 ಸಾವಿರ ಜನರು ಭಾಗವಹಿಸಿದ್ದರು.

ಕಾರ್ಡೆಲ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಫಾ| ಕ್ಲಿಫರ್ಡ್ ಫೆರ್ನಾಂಡಿಸ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು