2:37 PM Monday22 - September 2025
ಬ್ರೇಕಿಂಗ್ ನ್ಯೂಸ್
ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ…

ಇತ್ತೀಚಿನ ಸುದ್ದಿ

ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಸಂಭ್ರಮ – ಸಡಗರದ ಗೌತಮ ಪಂಚ ಮಹಾ ರಥೋತ್ಸವ: ಲಕ್ಷಾಂತರ ಭಕ್ತರ ಹರ್ಷೋದ್ಗಾರ

22/03/2024, 17:16

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಲಕ್ಷಾಂತರ ಭಕ್ತರ ಹರ್ಷೋದ್ಗಾರದೊಂದಿಗೆ ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಗೌತಮ ಪಂಚ ಮಹಾ ರಥೋತ್ಸವ ನಡೆಯಿತು.


ರಥೋತ್ಸವದ ಹಿನ್ನೆಲೆ ಗಣಪತಿ, ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿ, ಪಾರ್ವತಿ ಅಮ್ಮನವರು ಶ್ರೀ ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರರ ಅಲಂಕೃತ ಉತ್ಸವಮೂರ್ತಿಗಳನ್ನು ದೇವಾಲಯದ ಪ್ರಾಂಗಣದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವಾಲಯದಿಂದ ಹೊರ ತಂದ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಬಣ್ಣ ಬಣ್ಣದ ಹೂವು ಹಾಗೂ ಬಂಟಿಂಗ್ಸ್ ಮತ್ತು ಬಾವುಟಗಳಿಂದ ಅಲಂಕರಿಸಲಾದ ಪಂಚ ರಥಗಳಲ್ಲಿ ಕೂರಿಸಲಾಯಿತು.
ಬಳಿಕ 6-30 ರಿಂದ 6-50 ಗಂಟೆ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಸಲ್ಲಿಸುವ ಮೂಲಕ ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. ಮೊದಲಿಗೆ ಗಣಪತಿ ಎರಡನೆಯದಾಗಿ ಶ್ರೀಕಂಠೇಶ್ವರ ಸ್ವಾಮಿಯವರ ದೊಡ್ಡ ರಥ ಮೂರನೆಯ ಸುಬ್ರಹ್ಮಣ್ಯ, ನಾಲ್ಕನೆಯದು ಶ್ರೀ ಚಂಡಿಕೇಶ್ವರ ಸ್ವಾಮಿ ಸೇರಿದಂತೆ ಕೊನೆಯದಾಗಿ ಶ್ರೀ ಪಾರ್ವತಿ ಅಮ್ಮನವರ ರಥಗಳು ಒಂದರ ಹಿಂದೆ ಒಂದರಂತೆ ರಾಜಬೀದಿಯಲ್ಲಿ ಸಾಗುವ ಮೂಲಕ ರಾರಾಜಿಸಿದವು.
ಹರ ಹರ ಮಹದೇವ್ ಎಂಬ ಘೋಷಣೆ ಹಾಗೂ ವಿಪ್ರರ ವೇದ ಘೋಷಗಳೊಂದಿಗೆ ನೂರಾರು ಟನ್ ತೂಕದ 108 ಅಡಿ ಎತ್ತರದ ಬೃಹತ್ ರಥವು ರಾಜಬೀದಿಯಲ್ಲಿ ಸಾಗುವ ಮೂಲಕ ಭಕ್ತರ ಮನಸೂರೆಗೊಂಡಿತು.
ಜಾತ್ರೆಗೆ ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರ ಮಹಾಪೂರವೇ ಹರಿದು ಬಂದಿತ್ತು. ಭಕ್ತರು ಹಾಗೂ ನವ ದಂಪತಿಗಳು ರಥಕ್ಕೆ ಹಣ್ಣು ದವನ ಎಸೆಯುವ ಮೂಲಕ ತಮ್ಮ ಭಕ್ತಿ ಭಾವ ಮೆರೆದರು.
ಯಾವುದೇ ಅಡೆತಡೆಗಳಿಲ್ಲದೆ ಐದು ರಥಗಳು ಬೆಳಿಗ್ಗೆ ಎಂಟು ಗಂಟೆಗೆ ಸ್ವಸ್ಥಾನ ಸೇರಿದವು.
ರಥದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಎಸ್ ಪಿ ನಂದಿನಿ ಹಾಗೂ ಡಿವೈ ಎಸ್ ಪಿ ರಘು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಜಾತ್ರೆಗೆ ಬಂದ ಲಕ್ಷಾಂತರ ಭಕ್ತರ ಹಸಿವು ದಾಹ ನೀಗಿಸಲು ನಗರದ ವಿವಿಧಡೆ ಹಲವಾರು ಸಂಘ ಸಂಸ್ಥೆಗಳು ಹಾಗೂ ಭಕ್ತರು ಅಲ್ಲಲ್ಲಿ ಪ್ರಸಾದ, ತಂಪು ಪಾನೀಯಗಳು, ನೀರು, ಮಜ್ಜಿಗೆ, ಸಿಹಿ ಹಂಚಿ ಭಕ್ತರ ಹಸಿವು ಹಾಗೂ ದಾಹ ನೀಗಿಸಲು ಮುಂದಾಗಿದ್ದರು.
ನವದಂಪತಿಗಳಾದ ನಂಜನಗೂಡು ತಹಸಿಲ್ದಾರ್ ಶಿವಕುಮಾರ್ ಕಾಸನೂರ್ ದಂಪತಿಗಳು ಮಾತನಾಡಿ ಜಾತ್ರೆಯ ಬಗ್ಗೆ ವಿವರಿಸಿದರು.
ಭಕ್ತರಾದ ಪ್ರಕಾಶ್ ಹಾಗೂ ಪ್ರಸಾದ ವಿತರಣೆ ಮಾಡಿದ ವಿನಾಯಕ ಮಿತ್ರ ಬಳಗದ ಮುಖಂಡ ಬಾಲ ಕುಮಾರ್ ಮಾತನಾಡಿ ಪ್ರಸಾದ ವಿನಿಯೋಗ ಹಾಗೂ ಜಾತ್ರೆಯ ಬಗ್ಗೆ ತಿಳಿಸಿದರು.
ಶಾಸಕ ದರ್ಶನ್ ಧ್ರುವನಾರಾಯಣ್, ಚಾಮರಾಜನಗರ ಲೋಕಸಭಾ ಸಂಭಾವ್ಯ ಅಭ್ಯರ್ಥಿ ಸುನಿಲ್ ಬೋಸ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು