5:58 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಶಾಂತಿಯುತ ಲೋಕಸಭೆ ಎಲೆಕ್ಷನ್: ಕಮಿಷನರೇಟ್ ವ್ಯಾಪ್ತಿಯಲ್ಲಿ ಮತ್ತೆ 10 ಮಂದಿ ಗಡಿಪಾರು

22/03/2024, 00:18

ಮಂಗಳೂರು(reporterkarnataka.com): ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತೆ 10 ಮಂದಿಯನ್ನು ಗಡಿಪಾರು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಗಡಿಪಾರು ಆದವರ ಸಂಖ್ಯೆ 26ಕ್ಕೇರಿದೆ.
ಹಲ್ಲೆ, ದೊಂಬಿ, ಅಶಾಂತಿ ಸೃಷ್ಟಿ,ಕ್ರಿಮಿನಲ್‌ ಸಂಚು ಹೂಡುವಿಕೆ, ಕೊಲೆ ಯತ್ನ ಇತ್ಯಾದಿ ಪ್ರಕರಣಗಳನ್ನು ಹೊಂದಿರುವ ಆರೋಪಿಗಳನ್ನು ಗಡೀಪಾರು ಮಾಡಲಾಗಿದೆ. ಕಸಬಾ ಬೆಂಗ್ರೆಯ ಮೊಹಮ್ಮದ್‌ ಸುಹೈಲ್‌ (21), ಕಣ್ಣೂರು ಕೊಡಕ್ಕಲ್‌ನ ನಿಕ್ಷಿತ್‌ ಪೂಜಾರಿ (21), ಉಳ್ಳಾಲ ಸೋಮೇಶ್ವರದ ಸುನಿಲ್‌ (24), ಉಳ್ಳಾಲ ಬಸ್ತಿಪಡುವಿನ ಯತೀಶ್‌ (46), ಮೂಲ್ಕಿ ಕಾರ್ನಾಡು ಬಿಜಾಪುರ ಕಾಲನಿಯ ಧರ್ಮಲಿಂಗ (34), ಕಣ್ಣೂರಿನ ಮೊಹಮ್ಮದ್‌ ಹನೀಜ್‌ (32), ಮೂಲ್ಕಿ ಚಿತ್ರಾಪುರದ ತೇಜಪಾಲ್‌ ಆರ್‌. ಕುಕ್ಯಾನ್‌ (40), ವಾಮಂಜೂರು ಉಳಾçಬೆಟ್ಟು ಮೊಹಮ್ಮದ್‌ ಅನ್ಸಾರ್‌ (31), ಪಾಂಡೇಶ್ವರ ಶಿವನಗರದ ಅಭಿಷೇಕ್‌ (29) ಎಂಬವರನ್ನು ಗಡೀಪಾರು ಮಾಡಲಾಗಿದೆ. ಇದುವರೆಗೆ 26 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಶಾಂತಿಯುತ ಚುನಾವಣೆ ನಡೆಯುವುದಕ್ಕಾಗಿ ಇವರೆಲ್ಲರನ್ನೂ ವಿವಿಧ ಜಿಲ್ಲೆಗಳಿಗೆ ಗಡೀಪಾರು ಮಾಡಲಾಗಿದೆ. ಅಲ್ಲದೆ ಶಾಂತಿಕಾಪಾಡುವುದು, ಉತ್ತಮ ವರ್ತನೆಗಾಗಿ 381 ಮಂದಿಯಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು