ಇತ್ತೀಚಿನ ಸುದ್ದಿ
ಕಾಸರಗೋಡು ಬಳಿ ಖಾಸಗಿ ಬಸ್ ಪಲ್ಟಿ: ಚಾಲಕ ಸಾವು, 20 ಮಂದಿಗೆ ಗಾಯ; ಜಿಲ್ಲಾಸ್ಪತ್ರೆಗೆ ದಾಖಲು
18/03/2024, 22:24

ಕಾಸರಗೋಡು(reporterkarnataka.com): ಮಂಗಳೂರಿನಿಂದ ಕಣ್ಣೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟಿದ್ದು, ಇತರ 20 ಮಂದಿ ಗಾಯಗೊಂಡಿದ್ದಾರೆ.
ಕಾಸರಗೋಡಿನ ಪೆರಿಯ ರಸ್ತೆಯಲ್ಲಿ ಸೋಮವಾರ ಸಂಜೆ 4 ಗಂಟೆಗೆ ಅಪಘಾತ ಸಂಭವಿಸಿದ್ದು, ಮೃತ ಚಾಲಕನನ್ನು ಮಧೂರು ರಾಮನಗರದ ನಿವಾಸಿ ಚೇತನ್ ಕುಮಾರ್(37) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಕಾಸರಗೋಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತದಿಂದ ಸ್ವಲ್ಪ ಕಾಲ ಸಂಚಾರ ವ್ಯತ್ಯಯ ಉಂಟಾಯಿತು. ನಂತರ ಅಗ್ನಿಶಾಮಕ ದಳದ ಕ್ರೇನ್ ಬಳಸಿ ಬಸ್ಸನ್ನು ರಸ್ತೆ ಬದಿಗೆ ಸರಿಸಲಾಯಿತು.